5ರಿಂದ 11 ವರ್ಷದ ಮಕ್ಕಳಿಗೆ ಈ ಲಸಿಕೆ ಉತ್ತಮ

0
64

ಫೈಜರ್ ಹಾಗೂ ಬಯೋ ಎನ್‌ ಟೆಕ್ ಫೈಜರ್ ಲಸಿಕೆಯ ಫಲಿತಾಂಶಗಳ ಬಗ್ಗೆ ವರದಿ ನೀಡಿದೆ. 5-11 ವರ್ಷ ವಯಸ್ಸಿನ ಮಕ್ಕಳಿಗೆ ಫೈಜರ್ ಕೊರೊನಾ ಲಸಿಕೆ ಸುರಕ್ಷಿತ ಎಂದು ಹೇಳಲಾಗಿದೆ. ಮಕ್ಕಳಲ್ಲಿ ಲಸಿಕೆಯು ಹೆಚ್ಚು ಪ್ರತಿಕಾಯಗಳನ್ನು ಸೃಷ್ಟಿ ಮಾಡುತ್ತವೆ ಎಂಬುದು ಸಾಬೀತಾಗಿದೆ. ಶೀಘ್ರದಲ್ಲೇ ಈ ಲಸಿಕೆ ಪ್ರಯೋಗಕ್ಕೆ ಅನುಮೋದನೆ ಸಿಗಲಿದೆ.

 

ಲಸಿಕೆಯನ್ನು 12 ವರ್ಷಕ್ಕಿಂತ ಮೇಲ್ಪಟ್ಟವರಿಗಿಂತ ಕಡಿಮೆ ಪ್ರಮಾಣದಲ್ಲಿ ನೀಡಲಾಗುವುದು. ಐದರಿಂದ 11 ವರ್ಷ ವಯಸ್ಸಿನವರ ಮೇಲೆ ಲಸಿಕೆ ಪ್ರಯೋಗ ನಡೆಸಲಾಗಿದ್ದು, ಲಸಿಕೆ ಸುರಕ್ಷಿತವಾಗಿದೆ ಎನ್ನುವ ಫಲಿತಾಂಶ ಬಂದಿದೆ. ಸಂಸ್ಥೆಯು ಡೇಟಾವನ್ನು ಯುರೋಪಿಯನ್ ಯೂನಿಯನ್ , ಯುನೈಟೆಡ್ ಸ್ಟೇಟ್ಸ್‌ ಹಾಗೂ ಪ್ರಪಂಚದಾದ್ಯಂತ ಸಾಧ್ಯವಾದಷ್ಟು ಬೇಗ ಸಲ್ಲಿಸಲು ಯೋಜನೆ ರೂಪಿಸಿದ್ದಾರೆ.

 

ಕೊರೊನಾ ವೈರಸ್‌ನ ಎರಡನೇ ಅಲೆ ಇದೀಗ ಭಾರತದಲ್ಲಿ ನಿಲ್ಲುವ ಸಂಕೇತಗಳು ಗೋಚರಿಸುತ್ತಿವೆ. ಆದರೆ, ಇಂದಿಗೂ ಕೂಡ ತಜ್ಞರು ಮೂರನೇ ಅಲೆಯ ಮುನ್ನೆಚ್ಚರಿಕೆಯನ್ನು ನೀಡುತ್ತಲೇ ಇದ್ದಾರೆ.

 

ಮೂರನೆಯ ಅಲೆ ಮಕ್ಕಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ವರ್ತಿಸಲಾಗುತ್ತಿದೆ. ಇದರ ಹಿಂದಿನ ಪ್ರಮುಖ ಕಾರಣ ಎಂದರೆ, ಭಾರತದಲ್ಲಿ ಮಕ್ಕಳಿಗಾಗಿ ಕೊರೊನಾ ವ್ಯಾಕ್ಸಿನ್ ಇಲ್ಲದೆ ಇರುವುದು.

ಅಮೆರಿಕಾದ ಔಷಧಿ ತಯಾರಕ ಕಂಪನಿಯಾಗಿರುವ ಫೈಜರ್ ಕಂಪನಿಯ ವ್ಯಾಕ್ಸಿನ್ ಮಾತ್ರ ವಿಶ್ವದಲ್ಲಿ ಮಕ್ಕಳಿಗೆ ನೀಡಲಾಗುವ ಏಕೈಕ ವ್ಯಾಕ್ಸಿನ್ ಆಗಿದೆ. ಇದೀಗ ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ AIIMS ದೆಹಲಿ ವೈದ್ಯ ಡಾ. ರಣದೀಪ್ ಗುಲೇರಿಯಾ ಭಾರತದಲ್ಲಿಯೂ ಕೂಡ ಮಕ್ಕಳಿಗೆ ನೀಡಲಾಗುವುದು ಎಂದಿದ್ದಾರೆ. ಶೀಘ್ರದಲ್ಲಿಯೇ ಫೈಜರ್ ಲಸಿಕೆ ಭಾರತಕ್ಕೆ ಬರಲಿದೆ ಎಂಬುದು ಇಲ್ಲಿ ಗಮನಾರ್ಹ ಸಂಗತಿ.

LEAVE A REPLY

Please enter your comment!
Please enter your name here