ನನಗೆ ಯಾವ ಹುದ್ದೆ ಮೇಲೂ ಆಸೆ ಇಲ್ಲ ? ಅನಾವಶ್ಯಕವಾಗಿ ನನ್ನ ಹೆಸರು ತರಬೇಡಿ !

admin
1 Min Read

ಉಪಚುನಾವಣೆ ಪಲಿತಾಂಶದ ಬಳಿಕ ಕಾಂಗ್ರೆಸ್ ಗೆ ತೀವ್ರ ಮುಖಭಂಗ ಆಗಿದೆ ಈ ಸಂದರ್ಭದಲ್ಲಿ ರಾಜಕೀಯ ವಲಯದಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಡಿ ಕೆ ಶಿವಕುಮಾರ್ ಅವರು ರೇಸ್ನಲಿದ್ದಾರೆ ಎಂಬ ಮಾತು ಕೇಳಿಬರುತ್ತಿತ್ತು ಆದರೆ ಅದಕ್ಕೆ ಇಂದು ಅವರು, ನಾನು ದೆಹಲಿಗೆ ಭೇಟಿ ನೀಡುತ್ತಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಡಿ. ಡಿ.14ಕ್ಕೆ ಎಐಸಿಸಿ ಭಾರತ್ ಬಚಾವೊ ಆಂದೋಲನವನ್ನು ಆಯೋಜನೆ ಮಾಡಿದೆ. ಅದರಲ್ಲಿ ಭಾಗವಹಿಸಲು ದೇಶಾದ್ಯಂತ ಎಲ್ಲಾ ನಾಯಕರಿಗೂ ಕರೆ ನೀಡಿದೆ. ಕರ್ನಾಟಕದಿಂದ ನಾನೂ ಸೇರಿದಂತೆ ಹಲವರು ದೆಹಲಿಗೆ ತೆರಳುತ್ತಿದ್ದು, ಅದರಲ್ಲಿ ಭಾಗವಹಿಸುತ್ತಿದ್ದೇವೆ ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ಅನಗತ್ಯವಾಗಿ ನನ್ನ ಹೆಸರನ್ನು ಎಳೆದು ತರಬೇಡಿ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಇದಕ್ಕೆ ಕೆಲವು ರಾಜಕೀಯ ವಲಯದವರು ಡಿಕೆ ಶಿವಕುಮಾರ್ ಗೆ ಕಾಂಗ್ರೆಸ್ ಮೇಲೆ ನಿರಾಸೆಯಾಗಿದೆ ಎಂಬ ಮಾತು ಕೂಡ ಕೇಳಿ ಬರ್ತಾ ಇದೆ ದೆಹಲಿಯಲ್ಲಿ ಕಾಂಗ್ರೆಸ್ ಮುಖಂಡರುಗಳು ಸಭೆ ನಡೆಸಿದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಮುಂದಿನ ನಡೆ ಏನು ಎಂದು ತಿಳಿಯುತ್ತದೆ .

Share This Article
Leave a Comment