ನನ್ನಂತೆ ಗಡ್ಡ ಬೇಕು ಅಂದ್ರೆ ಈ ಟಿಪ್ಸ್ ಪಾಲಿಸಿ ಎಂದ ಯಶ್..!!
ಕೆಜಿಎಫ್ ಶುರುವಾದ ಸಮಯದಿಂದ ಚಿತ್ರದ ಬಗ್ಗೆ ಎಷ್ಟು ಟಾಕ್ ಶುರುವಾಯಿತೊ, ಅಷ್ಟೇ ಯಶ್ ಅವರ ಗಡ್ಡದ ಕುರಿತು ಮಾತನಾಡಿದ್ರು.. ಇನ್ನು ರಾಧಿಕಾ ಅವರನ್ನು ಮದುವೆಯಾದ ನಂತರ ಮೊದಲು ಗಡ್ಡ ತೆಗೆಯುವಂತೆ ರಾಧಿಕಾ ಸೂಚಿಸಿದರು.. ಇದಾದ ನಂತರ ಯಶ್ ಗಡ್ಡಕ್ಕೆ ಕತ್ತರಿ ಕೂಡ ಹಾಕಿದರು. ಇದೀಗ ಯಶ್ ಮತ್ತೆ ಗಡ್ಡ ಬಿಟ್ಟಿದ್ದಾರೆ.
ಆದರೆ ಯಶ್ ಅವರಿಗೆ ಇಷ್ಟು ಬೇಗ ಹೇಗೆ ಗಡ್ಡ ಬೆಳೆಯುತ್ತೆ ಎನ್ನುವ ಪ್ರಶ್ನೆ ಹಲವರಿಗೆ ಕಾಡಿದ್ಯಂತೆ..? ಇದಕ್ಕೆ ಉತ್ತರ ಕೂಡ ಸಿಂಪಲ್..! ಯಶ್ ಅವರಂತೆ ಗಡ್ಡ ಬೇಕು ಅಂದ್ರೆ ಈ ಟಿಪ್ಸ್ ನ ಫಾಲೋ ಮಾಡಿ ಸಾಕು. ಶಿರಾಸನ ಯೋಗವನ್ನು ಮಾಡಿದರೆ ಸಾಕು ನಿಮ್ಮ ಗಡ್ಡ ಬಹಳ ಬೇಗ ಬೆಳೆಯುತ್ತದೆ.
ಹೌದು, ಹೀಗೆಂದು ಹೇಳಿದ್ದು ಸ್ವತಃ ರಾಕಿಂಗ್ ಸ್ಟಾರ್ ಯಶ್. ಅಭಿಮಾನಿಯೊಬ್ಬರು ಗಡ್ಡ ಬಿಡಬೇಕಾದರೆ ಏನಾದರೂ ಟಿಪ್ಸ್ ಕೊಡುವಿರಾ ಎಂದು ಯಶ್ ಅವರನ್ನು ಪ್ರಶ್ನಿಸಿದಾಗ, ಇದಕ್ಕೆ ಯಶ್ ಶಿರಾಸನ ಯೋಗವನ್ನು ಮಾಡಿ ಗಡ್ಡ ಬೇಗ ಬೆಳೆಯುತ್ತದೆ ಎಂದರು.. ಹಾಗಿದ್ರೆ ನೀವೂ ಕೂಡ ಒಮ್ಮೆ ಯಶ್ ಕೊಟ್ಟ ಈ ಟಿಪ್ಸ್ ಫಾಲೋ ಮಾಡಿ ನೋಡಿ..