ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ ವಕೀಲರಾದ ಮುಕುಲ್ ರೋಹ್ಟಗಿ, ಕಪಿಲ್ ಸಿಬಾಲ್ ಮತ್ತಿತರರನ್ನು ಭೇಟಿ ಮಾಡಿ ಚರ್ಚೆ ನಡೆಸಿ. ಇಂದು ಬೆಂಗಳೂರಿಗೆ ತೆರಳುತ್ತಿರುವ ಡಿಕೆಶಿ, ನನ್ನನ್ನು ಸಾಕಿದವರು, ಕಷ್ಟಕಾಲದಲ್ಲಿ ಹೋರಾಟ ಮಾಡಿದವರು, ಪೂಜೆ ಮಾಡಿಸಿದ ಎಲ್ಲರನ್ನೂ ವೈಯಕ್ತಿಕವಾಗಿ ಭೇಟಿಯಾಗಲು ಸಾಧ್ಯವಾಗದೆ ಇರಬಹುದು. ಆದರೆ ಸಾಧ್ಯವಾದಷ್ಟು ಜನರನ್ನು ಬೇಟಿಮಾಡುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಜನ ನನ್ನ ಮೇಲೆ ತೋರಿಸಿರುವ ಪ್ರೀತಿಗೆ ನಾನು ಆಭಾರಿ. ಅವರ ಋಣ ತೀರಿಸಲು ಪ್ರಯತ್ನಿಸುತ್ತೇನೆ ನಾನು ಯಾರ ಮನಸ್ಸಿಗೂ ನೋವು ಮಾಡಲು ಬಯಸುವುದಿಲ್ಲ. ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ . ತನ್ನ ತಾಯಿ ಮತ್ತು ಧರ್ಮಪತ್ನಿಗೆ ಜಾರಿ ನಿರ್ದೇಶನಾಲಯ ನೋಟೀಸ್ ನೀಡಿರುವ ಬಗ್ಗೆ ಅಕ್ಟೋಬರ್ 30 ರಂದು ದೆಹಲಿಯಲ್ಲಿ ವಿಚಾರಣೆ ಇದೆ. ಆಗ ಮತ್ತೆ ನಾನಾಗಲೀ ಅಥವಾ ನನ್ನ ತಮ್ಮನಾಗಲಿ ಬರಬೇಕು. ವಿಚಾರಣೆ ವೇಳೆ ಯಾವೆಲ್ಲ ವಕೀಲರು ಹಾಜರಾಗಬೇಕೆಂಬ ಬಗ್ಗೆ ನಿನ್ನೆ ಚರ್ಚೆ ಮಾಡಿ ಯೋಜನೆ ರೂಪಿಸಲಾಗಿದೆ ಎಂದರು.