ಕನ್ನಡ ಚಿತ್ರರಂಗದಲ್ಲಿ ಕೆಲವು ದಿನಗಳಿಂದ ಚರ್ಚೆ ನಡೆಯುತ್ತಿರುವ ನವರಸ ನಾಯಕ ಜಗ್ಗೇಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡುವಿನ ವಿವಾದಕ್ಕೆ ಇಂದು ಒಂದು ರೀತಿಯಲ್ಲಿ ಅಂತ್ಯಗೊಂಡಂತಾಗಿದೆ, ಇತ್ತೀಚಿಗೆ ಬಂದ ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್ಪೆಕ್ಟರ್ ವಿಕ್ರಂ ಚಿತ್ರದ ನಿರ್ಮಾಪಕ ರೊಡನೆ ಮಾತನಾಡಿದ ಜಗ್ಗೇಶ್ ಅವರ ಆಡಿಯೋ ಕ್ಲಿಪಿಂಗ್ ನಲ್ಲಿ ದರ್ಶನ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ದೊಡ್ಡ ವಿವಾದಕ್ಕೆ ಈಡಾಗಿತ್ತು ಅದಾದ ಕೆಲವು ದಿನಗಳ ನಂತರ ದರ್ಶನ್ ಅವರ ಅಭಿಮಾನಿಗಳು ಜಗ್ಗೇಶ್ ಅವರ ಹೊಸ ಚಿತ್ರದ ಚಿತ್ರೀಕರಣದ ವೇಳೆ ಆ ಸ್ಥಳಕ್ಕೆ ಹೋಗಿ ಜಗ್ಗೇಶ್ ಅವರಿಗೆ ದರ್ಶನ್ ಅವರಿಗೆ ಕ್ಷಮೆಯಾಚಿಸುವಂತೆ ದರ್ಶನ್ ಅವರ ಅಭಿಮಾನಿಗಳ ಗುಂಪೊಂದು ಏರುಧ್ವನಿಯಲ್ಲಿ ಜಗ್ಗೇಶ್ ಅವರಿಗೆ ಹಿರಿಯರು ಎನ್ನುವ ಗೌರವ ಕೊಡದೆ ಮಾತನಾಡಿದ್ರು,
ಆ ಸಮಯದಲ್ಲಿ ಮೊದಲು ನಾನು ಮಾತನಾಡಿಲ್ಲ ಎಂದ ಜಗ್ಗೇಶ್ ಅವರೂ ನಿಮ್ಮ ಪ್ರಕಾರ ನಾನು ಹೇಳಿದ್ದೇನೆ ಎಂದರೆ ಸಾರೀ ಕನ್ರಪ್ಪ ಎಂದು ಹೇಳಿ ಕಳ್ಸಿದ್ರು ಅದಾದನಂತರ ಮರುದಿನ ಜಗ್ಗೇಶ್ ಅವರು ತಮ್ಮ ಫೇಸ್ಬುಕ್ ಕತೆಯಿಂದ ಲೈವ್ ಬಂದು ತಮಗಾದ ನೋವನ್ನು ಹೇಳಿಕೊಂಡಿದ್ದರು. ಇಷ್ಟೆಲ್ಲಾ ಆದರೂ ದರ್ಶನ್ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಹಾಗಾಗಿ ಮನನೊಂದ ಜಗ್ಗೇಶ್ ಅವರು ಇಂದು ಮಧ್ಯಾಹ್ನ ಒಂದು ಪತ್ರಿಕಾಗೋಷ್ಠಿಯಲ್ಲಿ ದರ್ಶನ್ ನನಗೆ ಒಂದು ಕರೆ ಕೂಡ ಮಾಡಿಲ್ಲ ಅವನು ಕಷ್ಟದಲ್ಲಿದ್ದಾಗ ಚಿತ್ರರಂಗದಿಂದ ದರ್ಶನ್ ಒಟ್ಟಿಗೆ ಇದ್ದಿದ್ದು ನಾನು ಅದ್ಯಾವುದಕ್ಕೂ ಬೆಲೆ ಇಲ್ಲ ಎಂಬಂತಾಗಿದೆ ಇಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದರು,
ಅದಾದ ನಂತರ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ದರ್ಶನ್ ಅವರು ಈ ವಿಚಾರದ ಬಗ್ಗೆ ಮಾತನಾಡಿ ಜಗ್ಗೇಶ್ ಅವರು ಹಿರಿಯರು ಈಗ ಆಗಿರುವ ಘಟನೆ ಬಗ್ಗೆ ನನಗೆ ಏನು ಗೊತ್ತಿರಲಿಲ್ಲ ನನ್ನ ಅಭಿಮಾನಿಗಳು ಹೋಗಿರುವುದು ನನಗೆ ಗೊತ್ತಿಲ್ಲ ನನ್ನ ಸೆಲೆಬ್ರಿಟಿಸ್ ಗಳಿಂದ ನೋವಾಗಿದ್ದರೆ ಅವರ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಜಗ್ಗೇಶ್ ಅವರಿಗೆ ದರ್ಶನ್ ಕ್ಷಮೆಯಾಚಿಸಿದರು, ಇದೀಗ ಈ ವಿಚಾರಕ್ಕೆ ಜಗ್ಗೇಶ್ ಅವರು ಅಂತ್ಯ ಹಾಡಿದ್ದಾರೆ ತಮ್ಮ ಟ್ವಿಟರ್ ಖಾತೆಯಲ್ಲಿ ದರ್ಶನ್ ಗೆ ಧನ್ಯವಾದ ಹೇಳಿ ಈ ವಿವಾದಕ್ಕೆ ಅಂತ್ಯ ಹಾಡಿದ್ದಾರೆ.