ನನ್ನ ಉಸಿರು ದೇಶದ ಜನರಿಗೆ ಸಮರ್ಪಣೆ ! ದೇಶಕ್ಕೆ ಮೋದಿ ಭರವಸೆ .

Date:

ನನ್ನ ಜೀವದ ಕಣ ಕಣವೂ, ಪ್ರತಿ ಉಸಿರು ದೇಶದ ಜನರಿಗೆ ಸಮರ್ಪಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲವು ದಾಖಲಿಸಿದ ನಂತರ ಕಾರ್ಯಕರ್ತರು ಹಾಗೂ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜನರಿಗೆ ಅಭಿನಂದನೆ ಸಲ್ಲಿಸಿದರು. ಈ ವೇಳೆ ಅವರು ಹೇಳಿದ್ದಿಷ್ಟು.

‘ಇಂದಿನ ಈ ವಿಜಯೋತ್ಸವದಲ್ಲಿ ಭಾಗವಹಿಸಲು ಮೇಘ ರಾಜನು ಆಗಮಿಸಿದ್ದಾನೆ. ನಾವು ನವ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ಜನರ ಮುಂದೆ ಹೋಗಿದ್ದೆವು. ಕೋಟಿ ಕೋಟಿ ಜನರು ಇಂದು ಈ ಭಗೀರಥನ ಜೋಳಿಗೆ ತುಂಬಿ ಆಶೀರ್ವಾದ ಮಾಡಿದ್ದಾರೆ. ಭಾರತದ 130 ಕೋಟಿ ಜನರಿಗೆ ಕೈ ಮುಗಿದು ನಮಸ್ಕರಿಸುತ್ತೇನೆ.

ಈ ಚುನಾವಣೆ ಪ್ರಪಂಚದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ದೊಡ್ಡ ಘಟನೆ. ಇಷ್ಟು ದೊಡ್ಡ ಚುನಾವಣೆಯಲ್ಲಿ 40, 45 ಡಿಗ್ರಿ ಉಷ್ಣಾಂಶದಲ್ಲೂ ಜನ ಮತದಾನ ಚಲಾಯಿಸಿ ಅತಿ ಹೆಚ್ಚಿನ ಮತದಾನ ಮಾಡಿದ್ದಾರೆ.

ಮಹಾಭಾರತದ ಯುದ್ಧ ಮುಗಿದ ನಂತರವೂ ಕೃಷ್ಣನಿಗೆ ನೀನು ಯಾರ ಪರ ಎಂದು ಪ್ರಶ್ನೆ ಕೇಳಲಾಯಿತು. ಅದಕ್ಕೆ ಕೃಷ್ಣ ನಾನು ಯಾರ ಪಕ್ಷದಲ್ಲೂ ಇಲ್ಲ. ಅಸ್ತಿನಾಪುರದ ಪರವಾಗಿದ್ದೇನೆ ಎಂದು ಉತ್ತರಿಸಿದ್ದ. ಈಗ 2019ರ ಚುನಾವಣೆಯಲ್ಲೂ ದೇಶದ ಜನತೆ ಭಾರತದ ಪರವಾಗಿ ನಿಂತು ಈ ತೀರ್ಪು ಕೊಟ್ಟಿದ್ದಾರೆ. ದೇಶದ ಸಾಮಾನ್ಯ ಜನರ ಭಾವನೆ ದೇಶದ ಉಜ್ವಲ ಭವಿಷ್ಯದ ಪರವಾಗಿದೆ.ಈ ಚುನಾವಣೆಯಲ್ಲಿ ಗೆದ್ದ ಪ್ರತಿಯೊಬ್ಬರಿಗೂ ಅಭಿನಂದನೆಗಳು. ಅವರು ಯಾವುದೇ ಪಕ್ಷ, ಪ್ರದೇಶದಿಂದ ಆಯ್ಕೆಯಾಗಿರಲಿ, ನಾವೆಲ್ಲರೂ ಒಟ್ಟಾಗಿ ಹೆಗಲಿಗೆ ಹೆಗಲು ಕೊಟ್ಟು ದೇಶದ ಅಭಿವೃದ್ಧಿ ಕೆಲಸ ಮಾಡೋಣ.

2 ಕ್ಷೇತ್ರದಿಂದ 2ನೇ ಬಾರಿ ಆಯ್ಕೆಯಾಗಿದ್ದೇವೆ. ಈ ಹಾದಿ ಸುದೀರ್ಘವಾದದ್ದು. ಈ ಹಾದಿಯಲ್ಲಿ ನಾವು ಎಂದೂ ಎದೆಗುಂದಿಲ್ಲ. 2 ಕ್ಷೇತ್ರ ಗೆದ್ದಾಗಲೂ ಕಂಗೆಟ್ಟಿಲ್ಲ. ಈಗ 2ನೇ ಬಾರಿ ಆಯ್ಕೆಯಾದಗಲೂ ನಮ್ಮ ನಮ್ರತೆ, ಸಂಸ್ಕಾರ, ವಿವೇಕ ಮರೆತಿಲ್ಲ.

2014ರಲ್ಲಿ ನನಗೆ ಏನೂ ಗೊತ್ತಿರಲಿಲ್ಲ. ಆಗಲೂ ನನ್ನನ್ನು ಆಯ್ಕೆ ಮಾಡಿದಿರಿ. ಈ ಬಾರಿಯೂ ನನ್ನನ್ನು ಆಯ್ಕೆ ಮಾಡಿದ್ದೀರಿ. ಈ ಬಾರಿ ನನಗೆ ಸಾಕಷ್ಟು ಅಂಶ ತಿಳಿದಿದೆ.

ದೇಶದ ಇತಿಹಾಸದಲ್ಲಿ ಒಂದು ಸರ್ಕಾರ ತನ್ನ ಕಳೆದ ಬಾರಿಗಿಂತ ಹೆಚ್ಚು ಬಹುಮತ ಪಡೆದು ಪುನರಾಯ್ಕೆ ಮಾಡಿರುವುದು ಅತ್ಯದ್ಭುತ ಸಾಧನೆ. ನಿಮ್ಮ ಈ ಬೆಂಬಲ ನನ್ನ ಸಾಮರ್ಥ್ಯವನ್ನು ಹೆಚ್ಚಿಸಿದ್ದೀರಿ.

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...