ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತಿದ್ದ ಸರ್ಕಾರದ ಬಗ್ಗೆ ಲೂಟಿ ಸರ್ಕಾರ, ವರ್ಗಾವಣೆ ಸರ್ಕಾರ ಎಂದು ಟೀಕಿಸುತ್ತಿದ್ದ ಯಡಿಯೂರಪ್ಪ ಯಲಹಂಕಕ್ಕೆ ತಹಶೀಲ್ದಾರ್ ರನ್ನು ನೇಮಕ ಮಾಡಲು ಎಷ್ಟು ಹಣ ಪಡೆದಿದ್ದಾರೆ ಎಂಬುದನ್ನು ತಿಳಿಸಲಿ ಎಂದು ಹೇಳಿದ್ದಾರೆ.
ಫೋನ್ ಕದ್ದಾಲಿಕೆ ಪ್ರಕರಣ ನನ್ನನ್ನು ಹತ್ತಿಕ್ಕಲು ಬಳಸುತ್ತಿರುವ ಅಸ್ತ್ರವೆಂದು ಹೇಳಲಾಗುತ್ತಿದೆ. ಇಂತಹ ಎಲ್ಲ ಅಸ್ತ್ರಗಳನ್ನು ನಿಶಸ್ತ್ರ ಮಾಡುತ್ತೇನೆ ನೋಡುತ್ತಿರಿ.
ಎಷ್ಟೇ ಪ್ರಯತ್ನ ನಡೆಸಿದರೂ, ನನ್ನ ವರ್ಚಸ್ಸನ್ನು ತಗ್ಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.