ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಬಳಿ ಒಂದು ಹಾಡಾದರೂ ಹಾಡಿಸಬೇಕು ಎಂದು ನಿರ್ಮಾಪಕ ಸಾಲುಗಟ್ಟಿ ನಿಲ್ಲುತ್ತಿದ್ದರು. ಎಸ್‌ಪಿಬಿ ಹಾಡಿದ್ರೆ ಕಾಲ್‌ಶೀಟ್ ಕೊಡೋದು ಎನ್ನುತ್ತಿದ್ದ ನಟರು ಸಹ ಇದ್ದರು. ಭಾರತೀಯ ಚಿತ್ರರಂಗದ ಬಹುತೇಕ ಎಲ್ಲ ನಟರಿಗೂ ಎಸ್‌ಪಿಬಿ ಹಾಡಿದ್ದಾರೆ.
ಆದ್ರೆ, ಕನ್ನಡದ ಪಾಲಿಗೆ ಎಸ್‌ಪಿಬಿ ಬಹಳ ವಿಶೇಷ. ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್, ರವಿಚಂದ್ರನ್, ಪ್ರಭಾಕರ್, ಶಶಿಕುಮಾರ್ ಹೀಗೆ ಎಲ್ಲರಿಗೂ ತಮ್ಮದೇ ಧ್ವನಿ ಎಂಬಂತೆ ಬದಲಾಯಿಸಿಕೊಂಡು ಹಾಡುತ್ತಿದ್ದರು. ನೂರಾರು ಕಲಾವಿದರ ಚಿತ್ರಗಳಿಗೆ ಹಾಡಿರುವ ಎಸ್‌ಪಿಬಿ ಆ ಇಬ್ಬರು ನಟರ ಬಗ್ಗೆ ವಿಶೇಷವಾದ ಗೌರವ ಹೊಂದಿದ್ದರು. ಯಾರದು? ಮುಂದೆ ಓದಿ…
ಎಸ್‌ಪಿ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಕುರಿತು ಟಿವಿ ವಾಹಿನಿ ಜೊತೆ ಮಾತನಾಡಿದ ಭಾರತಿ ವಿಷ್ಣುವರ್ಧನ್, ಎಸ್‌ಪಿಬಿ ಬಹಳ ಇಷ್ಟ ಪಡುತ್ತಿದ್ದ ಹಾಗೂ ಗೌರವಿಸುತ್ತಿದ್ದ ಇಬ್ಬರು ನಟರ ಬಗ್ಗೆ ತಿಳಿಸಿದರು. ”ನನ್ನ ಹಾಡಿಗೆ ಜೀವ ಕೊಡೋದು ವಿಷ್ಣುವರ್ಧನ್ ಮತ್ತು ಕಮಲ್ ಹಾಸನ್ ಇಬ್ಬರೇ” ಎಂದು ಅನೇಕ ಸಲ ಹೇಳುತ್ತಿದ್ದರಂತೆ.
ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ಎಸ್‌ಪಿ ಬಾಲಸುಬ್ರಹ್ಮಣ್ಯಂ ಶಾರೀರ ಆಗಿದ್ದರು. ವಿಷ್ಣು ನಟಿಸುತ್ತಿದ್ದ ಬಹುತೇಕ ಎಲ್ಲ ಚಿತ್ರಗಳಿಗೂ ಎಸ್‌ಪಿ ಹಾಡಬೇಕಿತ್ತು. ಎಸ್‌ಪಿಬಿ ಹಾಡಿದರೇ ವಿಷ್ಣುವರ್ಧನ್ ಅವರೇ ಹಾಡಿದಂತೆ ಭಾಸವಾಗುತ್ತಿತ್ತು. ಅಷ್ಟರ ಮಟ್ಟಿಗೆ ಎಸ್‌ಪಿಬಿ ವಿಷ್ಣುವರ್ಧನ್‌ಗೆ ಆಪ್ತರಾಗಿದ್ದರು.