‘ನನ್ ಎಕ್ಡ‘ ಅಂತಿದ್ದ ಫೈರಿಂಗ್ ಸ್ಟಾರ್ ‘ಎಕ್ಡನೇ‘ ಇಲ್ಲದೆ ಬರಿ ಕಾಲಲ್ಲಿ ಸಂಚಾರ..!!
ಮಾತು ಶುರು ಮಾಡಿ ಮುಗಿಸೋ ಅಷ್ಟರಲ್ಲಿ ಹಲವು ಬಾರಿ ‘ನನ್ ಎಕ್ಡ‘ ಎನ್ನುವ ಫೈವರಿಂಗ್ ಸ್ಟಾರ್ ಹುಚ್ಚಾ ವೆಂಕಟ್ ಅವರ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ಈ ಫೋಟೊಗಳು ಇಷ್ಟೊಂದು ವೈರಲ್ ಆಗಲು ಕಾರಣ, ಮಾತು ಮಾತಿಗೆ ಎಕ್ಡ ಅಂತ ಬಳಸುವ ವೆಂಕಟ್ ಕಾಲಿನಲ್ಲೇ ಆ ಎಕ್ಡ ಇರಲ್ಲಿಲ್ಲ ಅನ್ನೋದು..
ಚೈನ್ನೈನ ರಸ್ತೆ ಬದಲಿಯಲ್ಲಿ ಓಡಾಡಿಕೊಂಡಿದ್ದ ವೆಂಕಟ್ ಬರೀ ಕಾಲಿನಲ್ಲಿ ನಟರಾಜ ಸರ್ವಿಸ್ ಕೈಗೊಂಡಿದ್ದಾರೆ.. ಸದ್ಯ ‘ದುರಹಂಕಾರಿ ಹುಚ್ಚ ವೆಂಕಟ್‘ ಸಿನಿಮಾ ಮಾಡ್ತೀನಿ ಅಂತ ಹೇಳಿಕೊಂಡಿರುವ ವೆಂಕಟ್ ಚೆನ್ನೈನಲ್ಲಿ ಏನು ಮಾಡ್ತಿದ್ದಾರೆ ಅನ್ನೋದು ಮಾತ್ರ ಯಾರಿಗು ಗೊತ್ತಿಲ್ಲ.. ಆದರೆ ಕೆಲವರು ಚಿತ್ರದ ಶೂಟಿಂಗ್ ಅಂತಾರೆ, ಮತ್ತೆ ಕೆಲವರು ಇದು ವೆಂಟಕ್ ಅಣ್ಣ ಅಲ್ವೇ ಅಲ್ಲ ಅಂತಿದ್ದಾರೆ… ಹೀಗಿದ್ರು ಕಾಲಿನಲ್ಲಿ ಚಪ್ಪಲಿ ಇಲ್ಲದ ವೆಂಕಟ್ ಅವರ ಫೋಟೊ ಮಾತ್ರ ಈ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ..