ಭಾರತ ಮತ್ತು ಶ್ರೀಲಂಕಾ ವಿರುದ್ಧ ನಡೆಯುತ್ತಿರೋ ಮೂರು ಪಂದ್ಯಗಳ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿರುವ ರೋಹಿತ್ ಶರ್ಮಾ ತನ್ನ ಬಗ್ಗೆ, ತನ್ನ ಫ್ಯಾಮಿಲಿ ಬಗ್ಗೆ ಕೇಳಿ ಬಂದಿರೋ ಟೀಕೆಗೆ ಕೆಂಡಾಮಂಡಲರಾಗಿದ್ದಾರೆ.
“ನನ್ನ ಬಗ್ಗೆ ಮಾತನಾಡಿ ಪರವಾಗಿಲ್ಲ. ಆದರೆ ನನ್ನ ಕುಟುಂಬವನ್ನು ಸುಮ್ಮನೇ ಎಳೆದು ತರಬೇಡಿ” ಎಂದು ಶರ್ಮಾ ಗರಂ ಆಗಿದ್ದಾರೆ. ಹೀಗೆ ಶರ್ಮಾ ತಿರುಗೇಟು ನೀಡಿದ್ದು ತಮ್ಮ ವಿರುದ್ಧ ಇಲ್ಲ-ಸಲ್ಲದ ಆರೋಪ ಮಾಡುತ್ತಿರುವವರಿಗೆ.
ಐಸಿಸಿ ವಿಶ್ವಕಪ್ ವೇಳೆ ಆಟಗಾರರು ತಮ್ಮ ಹೆಂಡತಿ ಮತ್ತು ಗೆಳತಿಯರನ್ನು ತಮ್ಮೊಡನೆ 15 ದಿನಗಳ ಕಾಲ ಉಳಿಸಿಕೊಳ್ಳುವ ಅವಾಕಶವಿತ್ತು. ಆದರೆ ಭಾರತದ ಆಟಗಾರರೊಬ್ಬರು ಯಾರಿಗೂ ಮಾಹಿತಿ ನೀಡದೆ 7 ವಾರಕ್ಕೂ ಹೆಚ್ಚು ಕಾಲ ತಮ್ಮೊಂದಿಗೆ ಪತ್ನಿಯನ್ನು ಉಳಿಸಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿದೆ. ಹೀಗೆ ಬಿಸಿಸಿಐ ಮಾತನ್ನು ದಿಕ್ಕರಿಸಿ ಪತ್ನಿಯನ್ನು ಉಳಿಸಿಕೊಂಡ ಆಟಗಾರ ರೋಹಿತ್ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಮೌನ ಮುರಿದಿರುವ ಹಿಟ್ ಮ್ಯಾನ್ಸ್ ‘ಕುಟುಂಬದ ಬಗ್ಗೆ ಮಾತನಾಡಬೇಡಿ. ನನ್ನ ಬಗ್ಗೆ ಮಾತಾಡಿ. ಕುಟುಂಬ ಯಾವಾಗಲೂ ನನಗೆ ಬೆಂಬಲಿಸುತ್ತದೆ’ ಸ್ಟ್ರೈಟ್ ಹಿಟ್ ಹೊಡೆದಿದ್ದಾರೆ.
ನನ್ ಫ್ಯಾಮಿಲಿನ ಎಳೆದು ತರ್ಬೇಡಿ ಅಂತ ರೋಹಿತ್ ಶರ್ಮಾ ತಿರುಗೇಟು ನೀಡಿದ್ದು ಯಾರಿಗೆ?
Date: