ತೃಣಮೂಲ ಕಾಂಗ್ರೆಸ್ ಕೌನ್ಸಿಲರುಗಳ ಸಭೆಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ‘ಟಿಎಂಸಿ ದುರ್ಬಲ ಪಕ್ಷವಲ್ಲ. ಹಣ ಪಡೆದು 15-20 ಕೌನ್ಸಿಲರ್‌ಗಳು ಪಕ್ಷವನ್ನು ತೊರೆದ ಕೂಡಲೇ ನಾನೇನು ಹೆದರುವುದಿಲ್ಲ. ಪಕ್ಷದ ಶಾಸಕರು ಪಕ್ಷವನ್ನು ತೊರೆಯಲು ಬಯಸಿದರೆ, ಅವರು ಖಂಡಿತಾ ಹೋಗಬಹುದು. ನಮ್ಮ ಪಕ್ಷದಲ್ಲಿ ಕಳ್ಳರು ಇರುವುದನ್ನು ನಾವು ಬಯಸುವುದಿಲ್ಲ. ಒಬ್ಬ ವ್ಯಕ್ತಿ ಪಕ್ಷ ತೊರೆದರೆ ಅಂತಹ 500 ಜನರನ್ನು ನಾನು ಸಿದ್ಧಗೊಳಿಸುತ್ತೇನೆ’ ಎಂದು ಹೇಳಿದರು.
ನವದೆಹಲಿಯಲ್ಲಿ ಸೋಮವಾರ ತೃಣಮೂಲ ಕಾಂಗ್ರೆಸ್‍ನ ಶಾಸಕ ಸುನೀಲ್ ಸಿಂಗ್ ಹಾಗೂ 15 ಕೌನ್ಸಿಲರ್ ಗಳು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.