ಲೆಕ್ಕವಿಲ್ಲದಷ್ಟು ಹುಡುಗರ ನಿದ್ರೆಗೆಡಿಸಿರೋ ಸ್ಟಾರ್ ನಟಿ ನಯನಾತಾರ ಹೊಸಬಾಳಿನ ಹೊಸ್ತಿಲಲ್ಲಿ ಇದ್ದಾರೆ..! ಅವರೀಗ ಡೈರೆಕ್ಟರ್ ಒಬ್ಬರನ್ನು ವಿವಾಹವಾಗಲಿದ್ದಾರೆ ಎನ್ನುವು ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ.
ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೊತೆಯಲ್ಲಿ ದರ್ಬಾರ್ ಸಿನಿಮಾದಲ್ಲಿ ತುಂಬಾನೇ ಬ್ಯುಸಿ ಇರುವ ನಯನಾತಾರ ಆ ಸಿನಿಮಾದ ಜೊತೆಯಲ್ಲೇ ಟಾಲಿವುಡ್ನ ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ನಯನಾ ಜೀವನದ ಹೊಸ ಇನ್ನಿಂಗ್ಸ್ ಅಂದರೆ ದಾಂಪತ್ಯಕ್ಕೆ ಕಾಲಿಡುವ ಸೂಚನೆಯೊಂದು ಸಿಕ್ಕಿದೆ.
ನಯನಾತಾರ ತಮ್ಮ ಬಹುಕಾಲದ ಗೆಳೆಯ ವಿಗ್ನೇಶ್ ಅವರನ್ನು ಮದುವೆ ಆಗಲಿದ್ದಾರೆ ಶೀಘ್ರದಲ್ಲೇ ಅವರೊಡನೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ
ಸುದ್ದಿ ಹರಿದಾಡುವುದನ್ನು ತಿಳಿದ ಅಭಿಮಾನಿಗಳು ಆದಷ್ಟು ಬೇಗ ಇಬ್ಬರೂ ಮದುವೆ ಆಗಲಿ ಎಂದು ಹೇಳುತ್ತಿದ್ದಾರೆ. ವಿಗ್ನೇಶ್ ಮತ್ತು ನಯನಾತಾರ ಅನೇಕ ಕಾರ್ಯಕ್ರಮಗಳಲ್ಲಿ ಜೊತೆ ಜೊತೆಯಾಗಿ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ.
ನಯನಾ ಮತ್ತು ವಿಗ್ನೇಶ್ ಮದುವೆ ಆಗುವ ಸುದ್ದಿ ಹರಿದಾಡುತ್ತಿದೆಯಾದರೂ ನಯನಾ ಆಗಲಿ ಅಥವಾ ವಿಗ್ನೇಶ್ ಆಗಲಿ ಈ ಬಗ್ಗೆ ಅಧಿಕೃತವಾಗಿ ಏನನ್ನೂ ಇಲ್ಲಿಯವರೆಗೂ ಹೇಳಿಲ್ಲ
ನಯನಾ ತಾರ ಜೋಡಿ ಆಗ್ತಿರೋ ಆ ಲಕ್ಕಿ ಡೈರೆಕ್ಟರ್ ಯಾರ್ ಗೊತ್ತಾ?
Date: