No menu items!
12.5 C
Munich
Monday, May 4, 2026

ಕೊಹ್ಲಿ, ಡಿವಿಲಿಯರ್ಸ್ ವಿಡಿಯೋ ವೈರಲ್..! ಆ ವಿಡಿಯೋದಲ್ಲಿ ವಿರಾಟ್​, ಎಬಿಡಿ ಅದೆಂಥಾ ಮಾತಾಡಿಬಿಟ್ಟಿದ್ದಾರೆ..!?

Must read

ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು ಎದುರಿಸುತ್ತಿದೆ. ಇದು ಆರ್​ಸಿಬಿಯ ಈ ಬಾರಿಯ ಲಾಸ್ಟ್ ಮ್ಯಾಚ್. ಮುಂದಿನ ಹಂತಕ್ಕೆ ಹೋಗದೆ ಸರಣಿಯಿಂದ ಹೊರಬಿದ್ದಿರುವ ಆರ್​ಸಿಬಿ ಕೊನೆಯ ಪಂದ್ಯದಲ್ಲಿ ಗೆಲುವಿನ ನಗೆ ಬೀರಿ ಟೂರ್ನಿಯಿಂದ ಹೊರನಡೆಯಲು ನೋಡುತ್ತಿದೆ.

ಕೊನೆಯ ಪಂದ್ಯ ಆರಂಭಕ್ಕೆ ಮೊದಲು ನಾಯಕ ವಿರಾಟ್​ ಕೊಹ್ಲಿ, 360 ಡಿಗ್ರಿ ಖ್ಯಾತಿಯ ಹೊಡಿ-ಬಡಿ ದಾಂಡಿಗ ಎಬಿ ಡಿವಿಲಿಯ್ಸ್ ಒಟ್ಟಿಗೇ ವಿಡಿಯೋ ಮೂಲಕ ಅಭಿಮಾನಿಗಳಿಗೆ ಮೆಸೇಜ್ ನೀಡಿದ್ದಾರೆ. ನಾವು ಉತ್ತಮ ರೀತಿಯಲ್ಲೇ ಪ್ರಯತ್ನ ಮಾಡಿದವು,..ನಿಮ್ಮ ನಿರೀಕ್ಷೆಗೆ ತಕ್ಕ ಆಟವಾಡಲು ಪ್ರಯತ್ನ ಪಟ್ಟೆವು ಆದರೆ ಅದು ಸಾಧ್ಯವಾಗದೆ ನಿರಾಸೆ ಅನುಭವಿಸಬೇಕಾಗಿದೆ. 12ನೇ ಆವೃತ್ತಿಯ ಐಪಿಎಲ್ ಬೇಸರ ತಂದಿದೆ. ಆದರೆ ನಮಗೆ ಬೆಂಬಲ ನೀಡಿದೆ ನಿಮಗೆಲ್ಲಾ ಧನ್ಯವಾದಗಳು.
ಕೊನೆಯ ಪಂದ್ಯದ ವೇಳೆ ಮಳೆಯಿಂದಾಗಿ ತಡವಾಗಿ ಆಟ ಆರಂಭವಾದರೂ ಕೊನೆಯವರೆಗೂ ಇದ್ದು ಸಪೋರ್ಟ್ ಮಾಡಿದಿರಿ. 12 ಗಂಟೆಯಾದರೂ ಕಾದು ಬೆಂಬಲ ನೀಡಿದಕ್ಕೆ ಧನ್ಯವಾದಗಳು..ಅದಕ್ಕೆ ನಾವು ಋಣಿಗಳಾಗಿದ್ದೇವೆ. ನಿಮ್ಮ ಪ್ರೋತ್ಸಾಹ ಇರಲಿ. ಮುಂದಿನ ವರ್ಷ ನಿಮ್ಮ ನಿರೀಕ್ಷೆಗೆ ತಕ್ಕ ಆಟ ಆಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಎ ಬಿ ಡಿವಿಲಿಯರ್ಸ್ ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ. ಆರ್​ ಸಿಬಿ ಅಭಿಮಾನಿಗಳು ಮುಂದಿನ ವರ್ಷವಾದರೂ ಆರ್ಸಿಬಿ ಕಪ್​ ಗೆಲ್ಲಲಿ ಎಂದು ಹಾರೈಸುತ್ತಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article