ಮಾಜಿ ಸಚಿವ ಗಾಲಿ ಜರ್ನಾರ್ದನ ರೆಡ್ಡಿಯವರ ಕಷ್ಟಗಳೆಲ್ಲಾ ಪರಿಹಾರವಾಗುವ ಕಾಲ ಕೂಡಿ ಬಂದಿದೆಯಂತೆ. ಹೀಗಂತ ನಾಗಸಾಧುವೊಬ್ಬರು ಭವಿಷ್ಯ ನುಡಿದಿದ್ದಾರೆ.
ಹೌದು, ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ, ದೇವರಕೊಳ್ಳದ ನಾಗಸಾಧು ದಿಗಂಬರ ರಾಜಭಾರತಿ ಸ್ವಾಮೀಜಿಯವರನ್ನು ಜನಾರ್ದನ ರೆಡ್ಡಿಯವರು ಮನೆಗೆ ಕರೆಸಿಕೊಂಡಿದ್ರು. ವರ್ಷದಲ್ಲಿ ಆರು ತಿಂಗಳು ಮಾತನಾಡಿದ್ರೆ ಮತ್ತೆ ಆರು ತಿಂಗಳು ಮೌನವಾಗಿರುವ ಈ ನಾಗಸಾಧು ಬಳಿ ರೆಡ್ಡಿ ತಮ್ಮ ಕಷ್ಟಗಳ ಬಗ್ಗೆ ಹೇಳಿಕೊಂಡಿದ್ದಾರೆ.
ಈ ವೇಳೆ ಶೀಘ್ರದಲ್ಲೇ ತಮ್ಮ ಎಲ್ಲಾ ಕಷ್ಟಗಳು ನಿವಾರಣೆಯಾಗುವುದು ಅಂತಾ ನಾಗಸಾಧು ಆಶೀರ್ವಾದ ಮಾಡಿದ್ದಾರಂತೆ. ಇದೇ ಜೂನ್ 15 ರಂದು ಹೊಸಪೇಟೆ ತಾಲೂಕಿನ ಸಂಕ್ಲಾಪುರದ ಶಾಲೆಯಲ್ಲಿ ಪಠ್ಯಪುಸ್ತಕ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ಜನಾರ್ದನ ರೆಡ್ಡಿಯವರು, ನಾಗಸಾಧುವನ್ನು ಅಹ್ವಾನಿಸಿದ್ದಾರೆ.