ನಾನು ಏನು ಬೇಕದರು ಮಾಡಲು ಸಿದ್ದ ಎಂದ್ರು ಡಿ ಕೆ ಶಿವಕುಮಾರ್ ಯಾಕೆ ಗೊತ್ತಾ?!

Date:

ಬಿಜೆಪಿಯ ನಾಯಕರು ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸುತ್ತಿದ್ದಾರೆಂದು ಸಚಿವ ಡಿ . ಕೆ . ಶಿವಕುಮಾರ್ ಹರಿಹಾಯ್ದಿದ್ದಾರೆ . ವಿಧಾನಸಭೆಯಲ್ಲಿ ಇಂದು ಮಾತನಾಡಿದ ಅವರು ನಾನೊಬ್ಬ ಮಧ್ಯಮ ವರ್ಗದ ಸಚಿವನಾಗಿದ್ದೇನೆ . ನನ್ನ ವಿರುದ್ಧ ಬಿಜೆಪಿಯ ಕೆಲವರು ವಿನಾಕಾರಣ ಆರೋಪ ಮಾಡಿದ್ದಾರೆ . ನನ್ನ ಮೇಲಿನ ಪ್ರಕರಣಗಳನ್ನು ರದ್ದು ಪಡಿಸಲು ನಾನು ಲಾಬಿ ನಡೆಸಿದ್ದೇನೆ , ಬಿಜೆಪಿಯವರು ಸರ್ಕಾರ ರಚನೆಗೆ ನಾನು ಬೆಂಬಲ ನೀಡುತ್ತಿದ್ದೇನೆಂದು ಹೇಳುತ್ತಿದ್ದಾರೆ . ಆದರೆ , ನಾನು ಜೈಲಿಗೆ ಹೋಗಲು ಸಿದ್ದವಿದ್ದೇನೆಂದು ಹೇಳಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ರನ್ನು ಕುಟುಕಿದರು .

ಇದೇ ವೇಳೆ , ಮಾತನಾಡಿದ ಡಿ . ಕೆ . ಶಿವಕುಮಾರ್ , ನಾನು ನನ್ನ ಮನೆ ಮೇಲೆ ಐಟಿ ದಾಳಿ ಆಗಿದ್ದಾಗಲು ಸೋತಿರಲಿಲ್ಲ , ನನ್ನ ಮೇಲೆ ಪ್ರಕರಣ ದಾಖಲಿಸಿದ್ದಾಗಲೂ ಬೇಸರವಾಗಿರಲಿಲ್ಲ . ಆದರೆ , ನನ್ನ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ . ನನಗೆ ನ್ಯಾಯಾಲಯ ಹಾಗೂ ಕಾನೂನಿನ ಮೇಲೆ ನಂಬಿಕೆ ಇದೆ . ನನ್ನ ಹಣೆಬರಹ ಏನಿರುತ್ತದೆಯೋ ಅದೇ ಆಗುತ್ತದೆ . ಹುಟ್ಟೋದು ಒಂದು ದಿನ, ಸಾಯೋದು ಒಂದು ದಿನ ಎಂದರು . ತಮ್ಮ ವಿರುದ್ಧ ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಸಚಿವ ಡಿ . ಕೆ . ಶಿವಕುಮಾರ್ ಸ್ಪಷ್ಟಪಡಿಸಿದರು . ಈ ಹಿಂದೆ ಮಾಜಿ ಸಚಿವ ಶ್ರೀರಾಮುಲು ಶಾಂತಾ ದೆಹಲಿಗೆ , ಡಿಕೆಶಿ ಜೈಲಿಗೆ ಎಂದು ಹೇಳಿದ್ದರು . ಬಿಜೆಪಿಯವರು ತಮ್ಮನ್ನು ಜೈಲಿಗೆ ಕಳುಹಿಸಲು ಫ್ಲ್ಯಾನ್ ಮಾಡಿದ್ದಾರೆಂದು ತೀವ್ರ ವಾಗ್ದಾಳಿ ನಡೆಸಿದರು .

ಇನ್ನು ತಾವು ಸ್ನೇಹಿತರಿಗಾಗಿ ಸುಮ್ಮನಿದ್ದೇವೆ . ಶಾಸಕರು ರಾಜೀನಾಮೆ ನೀಡಿದ ದಿನವೇ ಐವರು ಶಾಸಕರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದೆ . ಅವರನ್ನು ನಾವು ಮನೆಯಲ್ಲೇ ಕೂಡಿ ಹಾಕಬಹುದಿತ್ತು . ಆದರೆ , ಈ ರೀತಿ ಮಾಡಲಿಲ್ಲ . ಈ ಕುರಿತು ತಾವು ಗೃಹ ಸಚಿವ ಪರಮೇಶ್ವರ್ , ಸಚಿವ ಕೃಷ್ಣಭೈರೇಗೌಡ ಚರ್ಚೆ ನಡೆಸಿದ್ದೇವು . ಶಾಸಕ ಮುನಿರತ್ನರನ್ನು ನನ್ನ ಸ್ನೇಹಿತರೆಂದು ಕೂಡಿಹಾಕಲಿಲ್ಲ ಎಂದು ಹೇಳಿದರು .

ಇನ್ನು ಮುಂಬೈನಲ್ಲಿ ಅತೃಪ್ತ ಶಾಸಕರು ತಂಗಿದ್ದ ಹೋಟೇಲ್ ಬಳಿ ತೆರಳಿದಾಗಲೂ ಬೇಸರವಾಯಿತು . ಹೊಟೇಲ್ ನಲ್ಲಿ ಸ್ನಾನ ಮಾಡಲು ನಮಗೆ ಅವಕಾಶ ನೀಡಲಿಲ್ಲ . ಸುಮಾರು ೩ ಗಂಟೆಗಳ ಕಾಲ ಮಳೆಯಲ್ಲೇ ಹೊಟೇಲ್ ಹೊರಗೆ ನಿಲ್ಲಬೇಕಾಯಿತು ಎಂದು ಇದೇ ವೇಳೆ ಬೇಸರ ವ್ಯಕ್ತಪಡಿಸಿದರು .

Share post:

Subscribe

spot_imgspot_img

Popular

More like this
Related

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ ಬೆಂಗಳೂರು:-...

TNIT South Indian Media Award ಯಶಸ್ವಿ

TNIT South Indian Media Award ಯಶಸ್ವಿಯಾಗಿ ಮೂಡಿಬಂದಿದೆ. ಈ ಯಶಸ್ಸಿಗೆ...

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್ ಮೈಸೂರು: ಭೂಮಿ...

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್ ಮೈಸೂರು: ನಾಡದೇವತೆ ಚಾಮುಂಡೇಶ್ವರಿ...