ರಾಕಿಂಗ್ ಸ್ಟಾರ್ ಯಶ್ ಇಂದು ಮಂಡ್ಯ ಆಗಮಿಸಿದ್ರು. ಜಿಲ್ಲೆಯ ಮದ್ದೂರು ತಾಲೂಕಿನ ಕೆರೆಮೇಗಲದೊಡ್ಡಿ ಗ್ರಾಮದಲ್ಲಿನ ಅಭಿಮಾನಿಯೊಬ್ಬರ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಯಶ್ಗೆ ಮದ್ದೂರಿನ ಕೊಪ್ಪ ಸರ್ಕಲ್ ಹಾಗೂ ಕೆರೆಮೇಗಲದೊಡ್ಡಿ ಗ್ರಾಮದಲ್ಲಿ ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿದ್ರು. ಇನ್ನು ಇದೆ ವೇಳೆ ಪುಟ್ಟಮಗುವೊಂದರ ಹುಟ್ಟು ಹಬ್ಬದ ಅಂಗಾವಾಗಿ ಯಶ್ ಕೇಕ್ ಕಟ್ ಮಾಡಿ, ಮಗುವಿಗೆ ಕೇಕ್ ತಿನಿಸಿದರು.
ಈ ವೇಳೆ ಮಾತನಾಡಿದ ಯಶ್, ಚುನಾವಣೆ ಮುಗಿದ ಬಳಿಕ ಮೂರ್ನಾಲ್ಕು ಬಾರಿ ಮಂಡ್ಯಕ್ಕೆ ಬಂದಿದ್ದೆ. ಚುನಾವಣೆ ಮುಗಿದ ಬಳಿಕ ಸುಮಲತಾರನ್ನು ಭೇಟಿ ಮಾಡಿದ್ದೆ. ಇಲ್ಲಿ ಒಳ್ಳೆಯ ವಾತಾವರಣ ಇದೆ. ಮಂಡ್ಯ ಫಲಿತಾಂಶವನ್ನ ನಿರ್ದಿಷ್ಟವಾಗಿ ಹೇಳಲು ಆಗ್ತಿಲ್ಲ. ಜನ ಹಿಂಗೂ ಆಗಬಹುದು ಹಂಗೂ ಆಗಬಹುದು ಎಂದು ಮಾತನಾಡ್ತಿದ್ದಾರೆ. ಆದ್ರೆ, ಸುಮಲತಾ ಚುನಾವಣೆಯಲ್ಲಿ ಗೆದ್ದೇ ಗೆಲ್ತಾರೆ.
ಈಗಲೇ ಅವರ ಗೆಲುವಿನ ಅಂತರ ಹೇಳಿದ್ರೆ ಕೊಚ್ಚಿಕೊಂಡತಾಗುತ್ತದೆ ಅಂತಾ ಹೇಳಿದರು. ಇದೇ ವೇಳೆ, ನಾವು ಅಭ್ಯರ್ಥಿ ಪರ ಪ್ರಚಾರಕ್ಕೆಂದು ಬಂದ್ವಿ ಹೊದ್ವಿ. ನಾನು ಮಾತ್ರ ಮಂಡ್ಯ ರಾಜಕಾರಣಕ್ಕೆ ಬರಲ್ಲ, ಸ್ಪರ್ಧೆ ಕೂಡ ಮಾಡಲ್ಲ ಅಂತಾ ಹೇಳಿದರು.