ನಾನು ಲವ್ ಮಾಡಿ ಮದ್ವೆ ಆದೆ ಅನ್ಕೊಳಿ ಎಂದ ಸಿದ್ದು!

Date:

ಮತಾಂತರ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ಸದನದಲ್ಲಿ ಗಂಭೀರ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಿದ ಮಾತಿಗೆ ಎಲ್ಲರೂ ಬಿದ್ದು ಬಿದ್ದು ನಕ್ಕ ಘಟನೆ ನಡೆದಿದೆ.

ಅಷ್ಟಕ್ಕೂ ಸಿದ್ದರಾಮಯ್ಯ ಹೇಳಿದ್ದು ಏನೆಂದರೆ, ‘ನೋಡಿ ಈಗ ನಾನು ಲವ್‌ ಮಾಡಿ ಮದ್ವೆ ಆದೆ ಅಂತ ಅಂದ್ಕೊಳಿ’ ಎಂದ್ರು.

ಕೂಡಲೇ ‘ನಾನಲ್ಲ ಬಿಡಿ, ನನಗೆ ವಯಸ್ಸಾಗಿದೆ, ಯಾರೋ ಎಕ್ಸ್‌ ಲವ್‌ ಮಾಡಿ ಮದ್ವೆ ಆದ ಅಂತ ಅಂದ್ಕೊಳಿ’ ಎಂದರು.

ಕೂಡಲೇ ಮಧ್ಯೆ ಪ್ರವೇಶಿಸಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಅಲ್ಲರಿ ಸಿದ್ದರಾಮಯ್ಯನವರೇ ಪ್ರೀತಿಗೆ ಏಜ್‌ ಅಂತ ಇದೆಯೇನ್ರಿ’ ಎಂದು ಕೇಳಿದರು. ಅದಕ್ಕೆ ಸಿದ್ದರಾಮಯ್ಯನವರು, ‘ನಾನು ಹೇಳಿದ್ದು ಮದುವೆ ಅಂತ, ಪ್ರೀತಿ ಯಾವ ಏಜ್‌ನಲ್ಲಿ ಬೇಕಾದ್ರೂ ಮಾಡ್ಬೋದು. ಅದಕ್ಕೆ ಇದಕ್ಕೆ ಇಂಟರ್‌ಲಿಂಕ್‌ ಮಾಡಬೇಡಿ’ ಎಂದರು.

ಆಗ ಎದ್ದುನಿಂತ ಸಚಿವ ಕೆ.ಎಸ್‌.ಈಶ್ವರಪ್ಪ ‘ನಿಮಗೆ ವಯಸ್ಸಾಗಿದೆ ಅಂತ ಹೇಳಿದವರು ಯಾರ್ರಿ? ನಿಮ್ಮ ಮನೆಯವರು ಏನಾದ್ರೂ ಹೇಳಿದ್ದಾರಾ?’ ಎಂದು ಕೇಳಿದರು. ಅದಕ್ಕೆ ಸಿದ್ದರಾಮಯ್ಯ, ‘ಇಲ್ಲ.. ಇಲ್ಲ.. ಮನೆಯವರು ಹೇಳಲಿಲ್ಲ. ನನಗೇ ಹಾಗೆ ಅನ್ನಿಸಿತು. ನಿಮಗೇನಾದ್ರೂ ಅನ್ನಿಸ್ತದಾ ಎಂದು ಪ್ರಶ್ನಿಸಿದರು. ಅದಕ್ಕೆ ಈಶ್ವರಪ್ಪನವರು, ಇಲ್ಲ‍ಪ್ಪ ನಿಮಗೆ ವಯಸ್ಸಾಗಿದೆ ಎಂದು ನಮಗೂ ಅನ್ನಿಸುವುದಿಲ್ಲ ಎಂದರು. ನಂತರ ನಿಜವಾದ ವಿಷಯದ ಚರ್ಚೆ ಮುಂದುವರೆಯಿತು.

Share post:

Subscribe

spot_imgspot_img

Popular

More like this
Related

ಅಕ್ರಮ ಹಣ ವರ್ಗಾವಣೆ ಪ್ರಕರಣ; ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಗೆ ವೈದ್ಯಕೀಯ ಜಾಮೀನು

ಅಕ್ರಮ ಹಣ ವರ್ಗಾವಣೆ ಪ್ರಕರಣ; ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಗೆ...

ಬೆಂಗಳೂರು–ಮೈಸೂರು ರೈಲು ಮಾರ್ಗದ ಬೇಡಿಕೆಗಳ ಬಗ್ಗೆ ರೈಲ್ವೆ ಸಚಿವರೊಂದಿಗೆ ಕುಮಾರಸ್ವಾಮಿ ಚರ್ಚೆ

ಬೆಂಗಳೂರು–ಮೈಸೂರು ರೈಲು ಮಾರ್ಗದ ಬೇಡಿಕೆಗಳ ಬಗ್ಗೆ ರೈಲ್ವೆ ಸಚಿವರೊಂದಿಗೆ ಕುಮಾರಸ್ವಾಮಿ ಚರ್ಚೆ ನವದೆಹಲಿ:...

ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ಚಿನ್ನ, ಬೆಳ್ಳಿ ಬೆಲೆಯಲ್ಲಿ ಮತ್ತೆ ಇಳಿಕೆ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ಚಿನ್ನ, ಬೆಳ್ಳಿ ಬೆಲೆಯಲ್ಲಿ ಮತ್ತೆ...

ಭೀಕರ ರಸ್ತೆ ಅಪಘಾತ: ಕ್ರೂಸರ್-ಕ್ಯಾಂಟರ್ ಮುಖಾಮುಖಿ ಡಿಕ್ಕಿ, ಮೂವರು ಕೃಷಿ ಕಾರ್ಮಿಕರು ಸಾವು

ಭೀಕರ ರಸ್ತೆ ಅಪಘಾತ: ಕ್ರೂಸರ್-ಕ್ಯಾಂಟರ್ ಮುಖಾಮುಖಿ ಡಿಕ್ಕಿ, ಮೂವರು ಕೃಷಿ ಕಾರ್ಮಿಕರು...