No menu items!
19.8 C
Munich
Friday, April 17, 2026

MES ವಿರುದ್ಧ ದನಿ ಎತ್ತಿದ ರಚಿತಾ ರಾಮ್

Must read

ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್​) ಕಾರ್ಯಕರ್ತರ ಮಿತಿ ಮೀರಿದ ಪುಂಡಾಟಿಕೆ ಬಗ್ಗೆ ಇಡೀ ಕರ್ನಾಟಕವೇ ಗರಂ ಆಗಿದೆ.

ಕನ್ನಡ ಚಿತ್ರರಂಗದ ಅನೇಕರು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ನಟಿ ರಚಿತಾ ರಾಮ್​ (Rachita Ram) ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಖಿಲ್​ ಕುಮಾರಸ್ವಾಮಿ ನಟನೆಯ ‘ರೈಡರ್​’ ಸಿನಿಮಾದ (Rider Movie) ಪ್ರೀ-ರಿಲೀಸ್​ ಕಾರ್ಯಕ್ರಮದಲ್ಲಿ ಅವರು ಭಾಗಿ ಆಗಿದ್ದರು. ಈ ವೇಳೆ ‘ಟಿವಿ9 ಕನ್ನಡ’ದ ಜತೆ ಮಾತನಾಡಿದ ಅವರು ಕೆಲವು ವಿಷಯಗಳನ್ನು ಹಂಚಿಕೊಂಡರು.

‘ಖಂಡಿತ ಇದು ಬೇಜಾರಾಗುವಂತಹ ಸಂದರ್ಭ. ಕೆಲವೊಂದು ವಿಷಯವನ್ನು ಮಾತಿನಲ್ಲಿ ಹೇಳೋಕೆ ಆಗಲ್ಲ. ಎಲ್ಲರಿಗೂ ಪ್ರೀತಿ ನೀಡುವವರು ನಾವು. ನಮ್ಮ ಬೆನ್ನಿಗೆ ಚೂರಿ ಹಾಕುವಂತಹ ಕೆಲಸ ಮಾಡಿದಾಗ ಬೇಜಾರು ಆಗುತ್ತೆ. ಬೇಜಾರು ಆಗಿದೆ ಅಂತ ನಾವು ಸುಮ್ಮನೆ ಕೂರುವಂತಿಲ್ಲ. ನಮ್ಮನ್ನು ಕೆಣಕಿ ರೋಷ ಬರುವಂತೆ ಮಾಡಲಾಗಿದೆ. ಇದರ ಬಗ್ಗೆ ದೊಡ್ಡವರು ಒಂದು ನಿರ್ಧಾರಕ್ಕೆ ಬಂದಿದ್ದಾರೆ. ನನ್ನ ಬೆಂಬಲ ಇದಕ್ಕೆ ಇದ್ದೇ ಇರುತ್ತದೆ’ ಎಂದು ರಚಿತಾ ರಾಮ್​ ಹೇಳಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article