ಒಡಿಶಾ ರಾಜ್ಯದ ಚಕ ಗೋಪಾಲ್ ಪುರ ಮೂಲದ 23 ವರ್ಷದ ದ್ಯುತಿ ಚಾಂದ್ ತಾವು ಸಲಿಂಗ ಸಂಬಂಧದ ಮೂಲಕ ಸಂಗಾತಿಯನ್ನು ಕಂಡುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಚಾಂದ್, ನಾನು ನನ್ನ ಬಾಳಸಂಗಾತಿಯನ್ನು ಕಂಡುಕೊಂಡಿದ್ದೆನೆ. ಎಲ್ಲರಿಗೂ ಈ ವಿಚಾರದಲ್ಲಿ ತಮ್ಮದೇ ಆದ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ಸಲಿಂಗ ಸಂಬಂಧವನ್ನು ಈ ಮೊದಲಿನಿಂದಲೂ ನಾನು ಬೆಂಬಲಿಸುತ್ತಲೇ ಬಂದಿದ್ದೇನೆ. ಪ್ರಸ್ತುತ ನನ್ನ ಗಮನವನ್ನು ವಿಶ್ವ ಚಾಂಪಿಯನ್ ಶಿಪ್ ಹಾಗೂ ಒಲಂಪಿಕ್ಸ್ ಗೇಮ್ ಕಡೆಗೆ ಹರಿಸಿದ್ದೇನೆ ಎಂದು ಹೇಳಿದ್ದಾರೆ.
ಸೆಕ್ಷನ್ 377 ಅನ್ನು ಸುಪ್ರೀಂಕೋರ್ಟ್ ಕಳೆದ ವರ್ಷ ತೆರವುಗೊಳಿಸಿ ಸಲಿಂಗ ಸಂಬಂಧವನ್ನು ಭಾರತದಲ್ಲಿ ಮಾನ್ಯ ಮಾಡಿತ್ತು.