ಹಿಂದುಳಿದ ವರ್ಗಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ, ಬೇರೆ ಬೇರೆ ಸಮಾಜದವರನ್ನು ಬೆಳೆಸುವುದು ಇರಲಿ, ತಾವು ಪ್ರತಿನಿಧಿಸುವಂತಹ ಕುರುಬ ಸಮುದಾಯದ ನಾಯಕರನ್ನೇ ಬೆಳೆಸಲು ಮುಂದಾಗಿಲ್ಲ ಎಂದು ಈಶ್ವರಪ್ಪ ಅವರು ಟೀಕಿಸಿದರು.
ಈ ಹಿಂದೆ ಕುರುಬ ಸಮುದಾಯದ ಮುಖಂಡರಾದ ಎಚ್.ವಿಶ್ವನಾಥ್, ಭೈರತಿ ಬಸವರಾಜು, ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್ ಹೀಗೆ ಹಲವಾರು ಮಂದಿ ನಾಯಕರನ್ನು ತುಳಿದು, ಅವರೆಲ್ಲ ಪಕ್ಷ ಬಿಟ್ಟು ಹೋಗುವಂತೆ ಮಾಡಿದ ಕೀರ್ತಿ ಸಿದ್ದರಾಮಯ್ಯಗೆ ಸಲ್ಲುತ್ತದೆ ಎಂದು ಈಶ್ವರಪ್ಪ ಕಿಡಿಗಾರಿದರು.