No menu items!
13.9 C
Munich
Thursday, May 7, 2026

“ತಾಯಿಗೆ ದ್ರೋಹ ಮಾಡುವುದಕ್ಕಿಂತಲೂ ನೀಚ ಕೆಲಸ ಮಾಡಿದ್ದಾರೆ”

Must read

ಕೇವಲ ಅಧಿಕಾರಕ್ಕಾಗಿ, ಸಚಿವ ಸ್ಥಾನಕ್ಕಾಗಿ ಶಾಸಕ ಸ್ಥಾನವನ್ನ ವ್ಯಾಪಾರಕ್ಕೆ ಇಟ್ಟರೆ, ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವೇ? ಎಂದು ಆತಂಕ ವ್ಯಕ್ತಪಡಿಸಿದರು. ಯಾವ ವ್ಯಕ್ತಿಗಳಿಗೆ ಪಕ್ಷದ ಟಿಕೆಟ್ ನೀಡಿ, ನಮ್ಮ ಕಾರ್ಯಕರ್ತರು ಬೆವರು ಸುರಿಸಿ ಪ್ರಚಾರ ಮಾಡಿ, ಆ ಕ್ಷೇತ್ರದಿಂದ ಅವರನ್ನು ಗೆಲ್ಲಿಸಿ ಕಳಿಸಲಾಗಿತ್ತೊ ಅದೇ ವ್ಯಕ್ತಿಗಳು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ತಾಯಿಗೆ ದ್ರೋಹ ಮಾಡುವುದಕ್ಕಿಂತಲೂ ನೀಚ ಕೆಲಸ ಮಾಡಿದ್ದಾರೆ ಎಂದು ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ .

ಭ್ರಷ್ಟಾಚಾರ ಮಾಡಿ ಕೋಟಿ ಕೋಟಿ ಹಣ ಕೊಟ್ಟು  ಶಾಸಕರನ್ನ ಖರೀದಿಸಿದ್ದು, ಸುಪ್ರೀಂಕೋರ್ಟ್ ನ್ಯಾಯಾಧೀಶರು, ಸ್ಪೀಕರ್ ಅವರನ್ನು ಡೀಲ್ ಮಾಡಿಕೊಂಡಿರುವ ಬಗ್ಗೆ  ಮುಖ್ಯಮಂತ್ರಿ ಯಡಿಯೂರಪ್ಪ ಈ ಹಿಂದಿನ ಆಡಿಯೋದಲ್ಲಿ ಹೇಳಿದ್ದಾರೆ. ರಾಜ್ಯದಲ್ಲಿ ಸರಕಾರ ರಚನೆಗೆ ಬಿಜೆಪಿ ವಾಮ ಮಾರ್ಗ ಹಿಡಿದಿದ್ದು ಇದರಿಂದಲೇ ನಿರೂಪಿತವಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ  .

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article