ನಿಂಬೆಹಣ್ಣು ರಸ ಕುಡಿದರೆ ಏನೆಲ್ಲಾ ಆಗುತ್ತೆ ಗೊತ್ತಾ ?

Date:

ರಾಸಾಯನಿಕಯುಕ್ತ ಪಾನೀಯಗಳನ್ನು ಪ್ರತಿದಿನ ಸೇವಿಸುವ ಬದಲು ಕೆಲವು ನ್ಯಾಚುರಲ್ ಪಾನೀಯಗಳನ್ನು ಮನೆಯಲ್ಲಿಯೇ ಮಾಡಿ ಕುಡಿಯುವ ಮೂಲಕ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು. ಅಲ್ಲದೇ ಇದಕ್ಕೆ ಹೆಚ್ಚು ಖರ್ಚು ಮಾಡುವ ಅಗತ್ಯವಿಲ್ಲ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.

ಬಹುತೇಕ ಮಂದಿ ತೂಕ ಇಳಿಸಿಕೊಳ್ಳಲು ನಾನಾ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ತೂಕ ಇಳಿಸಿಕೊಳ್ಳಲು ಯೋಗ, ವ್ಯಾಯಾಮ, ಜಿಮ್, ಆಹಾರ ಪದ್ಧತಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಅಲ್ಲದೇ ಮಾರುಕಟ್ಟೆಯಲ್ಲಿ ಸಿಗುವ ಅನೇಕ ರಾಸಾಯನಿಕ ಪಾನೀಯಗಳನ್ನು ಕುಡಿಯುತ್ತಾರೆ. ಹೀಗಿದ್ದರೂ ಅಂದುಕೊಂಡಂತೆ ಉತ್ತಮ ಫಲಿತಾಂಶ ಸಿಗುವುದಿಲ್ಲ.

ಅಲ್ಲದೇ ಇವೆಲ್ಲವೂ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ. ಆದರೆ ಈ ರಾಸಾಯನಿಕಯುಕ್ತ ಪಾನೀಯಗಳನ್ನು ಪ್ರತಿದಿನ ಸೇವಿಸುವ ಬದಲು ಕೆಲವು ನ್ಯಾಚುರಲ್ ಪಾನೀಯಗಳನ್ನು ಮನೆಯಲ್ಲಿಯೇ ಮಾಡಿ ಕುಡಿಯುವ ಮೂಲಕ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು. ತೂಕ ಕಳೆದುಕೊಳ್ಳಲು ಸಹಾಯ ಮಾಡುವ ಸುಲಭವಾದ ಆಹಾರವೆಂದರೆ ಅದು ನಿಂಬೆಹಣ್ಣು.ನಿಂಬೆಹಣ್ಣು ಹೇಗೆ ದೇಹದ ತೂಕವನ್ನು ಕಡಿಮೆ ಮಾಡುತ್ತದೆ ಅಂತ ನೀವು ಯೋಚಿಸುತ್ತಿದ್ದರೆ, ಈ ಲೇಖನ ನಿಮಗೆ ಉತ್ತರ ನೀಡುತ್ತದೆ ನೋಡಿ..

ವಿಟಮಿನ್ ಸಿ ಅಧಿಕವಾಗಿರುತ್ತದೆ: ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಅಂಶವು ಅಧಿಕವಾಗಿದ್ದು, ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಇದು ತುಂಬಾನೇ ಒಳ್ಳೆಯದಂತೆ. ಅಧ್ಯಯನವೊಂದರ ಪ್ರಕಾರ ವಿಟಮಿನ್ ಸಿ ಯ ಕಡಿಮೆ ಸೇವನೆಯನ್ನು ಹೊಂದಿರುವ ಮಕ್ಕಳಿಗೆ ಹೋಲಿಸಿದರೆ ಹೆಚ್ಚು ವಿಟಮಿನ್ ಸಿ ಭರಿತ ಆಹಾರವನ್ನು ಸೇವಿಸುವ ಮಕ್ಕಳಲ್ಲಿ ಸ್ಥೂಲಕಾಯತೆಯ ಅಪಾಯವು ಕಡಿಮೆಯಾಗಿದೆ ಎಂದು ಕಂಡು ಹಿಡಿದಿದೆ.

ಕಡಿಮೆ ಕ್ಯಾಲೋರಿ: ಕಡಿಮೆ ಕ್ಯಾಲೋರಿಗಳನ್ನು ತಿನ್ನುವುದು ಮತ್ತು ದೈಹಿಕ ಚಟುವಟಿಕೆಯ ಮೂಲಕ ಹೆಚ್ಚು ಕ್ಯಾಲೋರಿಗಳನ್ನು ಬರ್ನ್ ಮಾಡುವುದು ತೂಕವನ್ನು ಕಳೆದುಕೊಳ್ಳುವ ಅತ್ಯುತ್ತಮ ಮಾರ್ಗವಾಗಿದೆ.

ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಾಗಿದ್ದರೆ, ನಿಮ್ಮ ಆಹಾರದಲ್ಲಿ ಕಡಿಮೆ ಕ್ಯಾಲೋರಿ ಆಹಾರಗಳನ್ನು ಸೇರಿಸುವುದು ಅವಶ್ಯಕ. ನಿಂಬೆ ನೀರು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದರಿಂದ ಮತ್ತು ಪೂರ್ಣತೆಯನ್ನು ಉತ್ತೇಜಿಸುತ್ತದೆ, ಇದು ತೂಕ ನಷ್ಟಕ್ಕೆ ಒಳ್ಳೆಯದು.

ತೂಕ ನಷ್ಟ ಆಹಾರದಲ್ಲಿ ನಿಂಬೆ ಸೇರಿಸುವುದು ಹೇಗೆ? ನಿಂಬೆ ನೀರು: ಜೀರ್ಣಕ್ರಿಯೆ ಮತ್ತು ಚಯಾಪಚಯವನ್ನು ಸುಧಾರಿಸಲು ಬೆಳಗ್ಗೆ ಒಂದು ಕಪ್ ನಿಂಬೆ ನೀರನ್ನು ಕುಡಿಯಿರಿ.

ಸ್ವಲ್ಪ ನಿಂಬೆ ರಸದೊಂದಿಗೆ ನಿಮ್ಮ ಸಲಾಡ್‌ಗಳಿಗೆ ಕಟುವಾದ ಪರಿಮಳವನ್ನು ಸೇರಿಸಿ. ಭಾರವಾದ ಡ್ರೆಸ್ಸಿಂಗ್‌ಗಳಿಂದ ಕ್ಯಾಲೋರಿಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

ನಿಂಬೆ ರಸದಲ್ಲಿ ಮ್ಯಾರಿನೇಟ್ ಮಾಡುವ ಮೂಲಕ ಹೆಚ್ಚುವರಿ ಕ್ಯಾಲೋರಿಗಳನ್ನು ಹಾಕದೆ ಆಹಾರದ ಸುವಾಸನೆ ಹೆಚ್ಚಿಸಿ.

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...