ನಿಂಬೆ ಜ್ಯೂಸ್ ಸೇವನೆಯಿಂದ ಆರೋಗ್ಯಕ್ಕೆ ಸಿಗುವ ಅದ್ಭುತ ಲಾಭಗಳೇನು ಗೊತ್ತಾ..?
ಪ್ರಕೃತಿಯಲ್ಲಿ ಹಲವು ಹಣ್ಣು–ತರಕಾರಿಗಳು ದೊರೆಯುತ್ತವೆ. ಅವುಗಳಲ್ಲಿ ನಿಂಬೆಹಣ್ಣು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮುಖ್ಯವಾದದ್ದು. ನಿಂಬೆ ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ, ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಆದ್ದರಿಂದಲೇ ಇದನ್ನು “ಸೂಪರ್ ಫುಡ್” ಎಂದು ಕರೆಯಲಾಗುತ್ತದೆ.
ನಿಂಬೆಹಣ್ಣು ವಿಟಮಿನ್ Cಯ ಉತ್ತಮ ಮೂಲ. ಪ್ರತಿದಿನ ನಿಂಬೆ ನೀರನ್ನು ಕುಡಿಯುವುದರಿಂದ ದೇಹಕ್ಕೆ ಅಗತ್ಯವಿರುವ ವಿಟಮಿನ್ Cಯ ಆರನೇ ಒಂದು ಭಾಗ ಸಿಗುತ್ತದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸಲು, ಜೀವಕೋಶ ಹಾನಿಯಿಂದ ರಕ್ಷಿಸಲು ಹಾಗೂ ಗಾಯಗಳನ್ನು ಬೇಗ ಗುಣಪಡಿಸಲು ಸಹಾಯಕ.
ನಿಂಬೆ ಜ್ಯೂಸ್ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ದೇಹದಲ್ಲಿ ಚೈತನ್ಯ ಹೆಚ್ಚಿಸುತ್ತದೆ. ಜೊತೆಗೆ ಜೀರ್ಣಕ್ರಿಯೆಯನ್ನು ಉತ್ತೇಜಿಸುವುದರಿಂದ ಹೊಟ್ಟೆ ಉಬ್ಬುವುದು, ಎದೆಯುರಿ ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆ. ವಯಸ್ಸಾದಂತೆ ಹೊಟ್ಟೆಯ ಆಮ್ಲದ ಪ್ರಮಾಣ ಕಡಿಮೆಯಾಗುವುದರಿಂದ, ನಿಂಬೆ ರಸ ಅದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ.
ಇದಲ್ಲದೆ, ನಿಂಬೆಹಣ್ಣಿನಲ್ಲಿ ಪೊಟ್ಯಾಸಿಯಮ್ ಹೆಚ್ಚು ಇರುವುದರಿಂದ ಹೃದಯದ ಆರೋಗ್ಯ, ನರಗಳ ಕಾರ್ಯ ಹಾಗೂ ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿ. ಮೂತ್ರಪಿಂಡದ ಕಲ್ಲುಗಳನ್ನು ತಡೆಯಲು ನಿಂಬೆ ನೀರು ಉತ್ತಮ ಪರಿಹಾರ. ಪ್ರತಿದಿನ ಬೆಳಿಗ್ಗೆ ನಿಂಬೆ ಜ್ಯೂಸ್ ಕುಡಿಯುವುದರಿಂದ ಮೂತ್ರದ ಪ್ರಮಾಣ ಹೆಚ್ಚುತ್ತದೆ, ಮೂತ್ರದ PH ಸಮತೋಲನವಾಗುತ್ತದೆ ಮತ್ತು ಕಿಡ್ನಿ ಕಲ್ಲುಗಳನ್ನು ತಡೆಯಲು ಸಹಾಯವಾಗುತ್ತದೆ.
ಚರ್ಮದ ಆರೈಕೆಯಲ್ಲಿ ನಿಂಬೆ ವಿಶೇಷ ಪಾತ್ರ ವಹಿಸುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ಗಳು ಚರ್ಮದಲ್ಲಿ ಸುಕ್ಕು ಕಡಿಮೆ ಮಾಡುತ್ತವೆ, ಕಾಂತಿಯುತವಾಗಿ ಕಾಪಾಡುತ್ತವೆ ಹಾಗೂ ಮೊಡವೆ ತಡೆಗಟ್ಟಲು ಸಹಾಯ ಮಾಡುತ್ತವೆ.
ತೂಕ ಇಳಿಸಲು ನಿಂಬೆ ಉಪಯೋಗಕಾರಿ. ನಿಂಬೆಹಣ್ಣಿನಲ್ಲಿರುವ ಪೆಕ್ಟಿನ್ ಫೈಬರ್ ಹೊಟ್ಟೆಯನ್ನು ತುಂಬಿದಂತೆ ಅನುಭವ ಮಾಡಿಸುವುದರಿಂದ ಹೆಚ್ಚು ತಿನ್ನುವತ್ತ ಕಡಿಮೆಯಾಗುತ್ತದೆ. ಬಿಸಿ ನಿಂಬೆ ನೀರು ಸೇವಿಸುವುದರಿಂದ ದೇಹದ ಕ್ಯಾಲೊರಿ ಕರಗುವಿಕೆಯನ್ನು ವೇಗಗೊಳಿಸಬಹುದು.