ನಿಂಬೆ ಸಿಪ್ಪೆಯಿಂದ ಎಷ್ಟೆಲ್ಲಾ ಪ್ರಯೋನಗಳು ಇದೆ ಗೊತ್ತಾ..?

Date:

ನಿಂಬೆ ಸಿಪ್ಪೆಯಿಂದ ಎಷ್ಟೆಲ್ಲಾ ಪ್ರಯೋನಗಳು ಇದೆ ಗೊತ್ತಾ..?

ನಿಂಬೆಹಣ್ಣಿನಂತೆಯೇ, ಅದರ ಸಿಪ್ಪೆಯಿಂದಲೂ ಸಾಕಷ್ಟು ಪ್ರಯೋಜನಗಳಿವೆ. ಆದ್ದರಿಂದ ಇನ್ನು ಮುಂದೆ ನಿಂಬೆ ಬಳಸಿದ ನಂತರ ಸಿಪ್ಪೆ ಎಸೆಯಬೇಡಿ. ನಿಂಬೆಸಿಪ್ಪೆ ಹೇಗೆ ಬಳಸಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಬಾಯಿಯ ಆರೋಗ್ಯಕ್ಕೆ ಒಳ್ಳೆಯದು
ಹುಳುಕು ಹಲ್ಲು ಮತ್ತು ವಸಡುಗಳ ಸೋಂಕಿಗೆ ನಿಂಬೆಹಣ್ಣಿನ ಸಿಪ್ಪೆ ಒಂದು ಔಷಧ ಎಂದು ಹೇಳಬಹುದು. ಏಕೆಂದರೆ ಇದರಲ್ಲಿ ತುಂಬಾ ಶಕ್ತಿಯುತವಾದ ಆಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳು ಸಾಕಷ್ಟಿವೆ. ಸೋಂಕುಕಾರಕ ಕ್ರಿಮಿಗಳು ಹೆಚ್ಚಾಗದ ಹಾಗೆ ಇವು ನೋಡಿಕೊಳ್ಳುತ್ತವೆ. ಬಾಯಿಗೆ ಸಂಬಂಧಪಟ್ಟಂತೆ ಇರುವ ಬಹುತೇಕ ಆರೋಗ್ಯ ಸಮಸ್ಯೆಗಳನ್ನು ಇದು ಸರಿಪಡಿಸುತ್ತದೆ.
ಆಂಟಿಆಕ್ಸಿಡೆಂಟ್ ಗಳ ಪ್ರಮಾಣ ಹೆಚ್ಚಿದೆ
ದ್ರಾಕ್ಷಿ ಹಣ್ಣಿಗಿಂತ ನಿಂಬೆಹಣ್ಣಿನಲ್ಲಿ ಇಂತಹ ಅಂಶಗಳು ಸಾಕಷ್ಟು ಕಂಡುಬರುತ್ತವೆ. ಆಕ್ಸಿಡೇಟಿವ್ ಒತ್ತಡವನ್ನು ನಿವಾರಣೆ ಮಾಡುವಲ್ಲಿ ಸಹ ಇದು ಪ್ರಯೋಜನಕಾರಿ. ನಿಮ್ಮ ರೋಗ ನಿರೋಧಕ ಶಕ್ತಿ ಕೂಡ ಇದರಿಂದ ಹೆಚ್ಚಾಗುತ್ತದೆ.
ಆಂಟಿ ಮೈಕ್ರೋಬಿಯಲ್ ಮತ್ತು ಆಂಟಿ ಫಂಗಲ್
ಹೌದು ನಿಂಬೆಹಣ್ಣಿನ ಸಿಪ್ಪೆ, ಇವೆರಡು ಗುಣಲಕ್ಷಣಗಳನ್ನು ಒಳಗೊಂಡಿದೆ. ಯಾವುದೇ ರೀತಿಯ ಸೋಂಕುಗಳು ದೇಹದ ಒಳಗೆ ಅಥವಾ ಮೇಲ್ಭಾಗದ ಚರ್ಮದಲ್ಲಿ ಕಂಡುಬರದ ಹಾಗೆ ಇದು ನೋಡಿಕೊಳ್ಳುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ
• ಇದಕ್ಕೆ ಪ್ರಮುಖ ಕಾರಣ ಎಂದರೆ ನಿಂಬೆಹಣ್ಣಿನ ಸಿಪ್ಪೆ ಯಲ್ಲಿ ಕಂಡುಬರುವಂತಹ ಫ್ಲೇವನಾಯ್ಡ್ ಮತ್ತು ವಿಟಮಿನ್ ಸಿ ಪ್ರಮಾಣ. ಇದು ಕ್ರಮೇಣವಾಗಿ ದೇಹದ ರೋಗನಿರೋಧಕ ವಾತಾವರಣವನ್ನು ಹೆಚ್ಚಿಸುತ್ತದೆ.
• ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದರೆ ಸಣ್ಣಪುಟ್ಟ ಶೀತ, ಕೆಮ್ಮು ಸಮಸ್ಯೆಯಿಂದ ಹಿಡಿದು ದೊಡ್ಡ ದೊಡ್ಡ ಆರೋಗ್ಯ ಸಮಸ್ಯೆಗಳಿಂದ ಸಹ ಪಾರಾಗಬಹುದು.
ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು
ಯಾರಿಗೆ ಅಧಿಕ ರಕ್ತದ ಒತ್ತಡ, ಹೆಚ್ಚು ಕೊಲೆಸ್ಟ್ರಾಲ್ ಮತ್ತು ಬೊಜ್ಜು ಇರುತ್ತದೆ ಅವರಿಗೆ ಅಂತಹವರಿಗೆ ಹೃದಯದ ತೊಂದರೆ ಕಟ್ಟಿಟ್ಟ ಬುತ್ತಿ. ಆದರೆ ನಿಂಬೆಹಣ್ಣಿನ ಸಿಪ್ಪೆಯಲ್ಲಿ ಇರುವಂತಹ ಫ್ಲೇವನಾಯ್ಡ್ ವಿಟಮಿನ್-ಸಿ ಮತ್ತು ಪೆಕ್ಟಿನ್ ಎಂಬ ನಾರಿನ ಅಂಶ ಈ ಒಂದು ತೊಂದರೆಯಿಂದ ರಕ್ಷಣೆ ಮಾಡುತ್ತದೆ.
• ಏಕೆಂದರೆ ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದ ಬಿಪಿ ನಿಯಂತ್ರಣಕ್ಕೆ ಬರುತ್ತದೆ.
ಕ್ಯಾನ್ಸರ್ ವಿರೋಧಿ ಲಕ್ಷಣಗಳು ಇದರಲ್ಲಿವೆ
• ಫ್ಲೇವನಾಯ್ಡ್ ಪ್ರಮಾಣ ಹೆಚ್ಚಾಗಿರುವುದರಿಂದ ಸಾಕಷ್ಟು ಬಗೆಯ ಕ್ಯಾನ್ಸರ್ ಸಮಸ್ಯೆಗಳಿಗೆ ನಿಂಬೆಹಣ್ಣಿನ ಸಿಪ್ಪೆ ಪರಿಹಾರ ಎಂದು ಹೇಳುತ್ತಾರೆ.
• ಇದರಲ್ಲಿ ವಿಟಮಿನ್ ಸಿ ಅಂಶ ಕೂಡ ಇರುವುದರಿಂದ ದೇಹದಲ್ಲಿ ಬಿಳಿ ರಕ್ತ ಕಣಗಳ ಸಂಖ್ಯೆ ಹೆಚ್ಚಿಸುತ್ತದೆ ಮತ್ತು ಕ್ಯಾನ್ಸರ್ ಕಾರಕ ಜೀವಕೋಶಗಳನ್ನು ಇಲ್ಲವಾಗಿಸುತ್ತದೆ. ವಿಶೇಷವಾಗಿ ಹೊಟ್ಟೆಗೆ ಸಂಬಂಧಪಟ್ಟ ಹಾಗೂ ಸ್ತನಗಳ ಕ್ಯಾನ್ಸರ್ ಸಮಸ್ಯೆಯನ್ನು ಇದು ನಿಯಂತ್ರಣ ಮಾಡುತ್ತದೆ. ಆದರೆ ಕ್ಯಾನ್ಸರ್ ಸಮಸ್ಯೆಗೆ ಇದು ಶಾಶ್ವತ ಪರಿಹಾರವಲ್ಲ.

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...