ಪೈರಸಿ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಪ್ರತಿಯೊಂದು ಚಿತ್ರರಂಗವನ್ನು ಬಿಡದೆ ಕಾಡುತ್ತಿರುವ ಪೆಡಂಭೂತ. ಪೈರಸಿ ಎಂಬ ಹೆಸರು ಕೇಳಿದರೆ ಸಾಕು ಚಿತ್ರ ನಿರ್ಮಿಸುವ ನಿರ್ಮಾಪಕರ ನಿದ್ರೆ ಹೋಗಿಬಿಡುತ್ತದೆ. ಇನ್ನು ಈ ಬಾರಿ ಕನ್ನಡ ಚಿತ್ರರಂಗಕ್ಕೂ ಸಹ ಪೈರಸಿ ಎಂಬ ಪೆಡಂಭೂತದ ಹಾವಳಿ ಜೋರಾಗಿಯೇ ಇದೆ. ನಟ ಸಾರ್ವಭೌಮ , ಕುರುಕ್ಷೇತ್ರ ಮತ್ತು ಪೈಲ್ವಾನ್ ಚಿತ್ರಗಳು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಪೈರಸಿ ಆಗಿಬಿಟ್ಟಿದ್ದವು. ಇನ್ನು ಪೈಲ್ವಾನ್ ಚಿತ್ರ ಪೈರಸಿ ಯಾದ ನಂತರ ಲಿಂಕ್ ಶೇರ್ ಮಾಡಿದ ಯುವಕನೋರ್ವನನ್ನು ಬಂಧಿಸಲಾಗಿದೆ. ಈತನ ಬಂಧನದ ಬೆನ್ನಲ್ಲೇ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಏರ್ಪಟ್ಟಿದ್ದು ಪೈಲ್ವಾನ್ ಚಿತ್ರತಂಡಕ್ಕೆ ಜನರು ಪ್ರಶ್ನೆ ಹಾಕುತ್ತಿದ್ದಾರೆ.
ಆ ಯುವಕ ಶೇರ್ ಮಾಡಿರುವ ಲಿಂಕ್ ತಮಿಳ್ ರಾಕರ್ಸ್ ಎಂಬ ವೆಬ್ ಸೈಟ್ ನದ್ದು. ಬೆಳಗ್ಗೆ ಬಿಡುಗಡೆಯಾಗುವ ಚಿತ್ರವನ್ನು ಮಧ್ಯಾಹ್ನವೇ ವೆಬ್ ಸೈಟ್ ನಲ್ಲಿ ಹಾಕುವ ಕೆಪಾಸಿಟಿ ಇರುವ ಏಕೈಕ ವೆಬ್ ಸೈಟ್ ಎಂದರೆ ಅದು ತಮಿಳು ರಾಕರ್ಸ್. ಪೈಲ್ವಾನ್ ಚಿತ್ರದಲ್ಲಿಯೂ ಸಹ ಆಗಿದ್ದು ಇಷ್ಟೇ ಬಿಡುಗಡೆಯ ದಿನವೇ ತಮಿಳು ರಾಕರ್ಸ್ ಎಂಬ ವೆಬ್ ಸೈಟ್ ನಲ್ಲಿ ಪೈಲ್ವಾನ್ ಚಿತ್ರದ ಪೈರಸಿ ಕಾಪಿಯನ್ನು ಹಾಕಲಾಗಿತ್ತು. ಈ ಲಿಂಕ್ ಅನ್ನು 7000 ಕ್ಕೂ ಹೆಚ್ಚು ಜನ ಶೇರ್ ಮಾಡಿದ್ದರು. ಆದರೆ ಬಂಧಿಸಿರುವುದು ಮಾತ್ರ ಕೇವಲ ಓರ್ವ ಯುವಕನನ್ನು ಇನ್ನ ಮಿಕ್ಕಿದ್ದ ಜನರನ್ನು ಯಾಕೆ ಬಂಧಿಸಿಲ್ಲ? ಕೇವಲ ಲಿಂಕ್ ಶೇರ್ ಮಾಡಿದವರನ್ನು ಬಂಧಿಸಿದ್ದಾರೆ ಆದರೆ ಚಿತ್ರವನ್ನು ಅಪ್ ಲೋಡ್ ಮಾಡಿದ ತಮಿಳ್ ರಾಕರ್ಸ್ ಅವರನ್ನು ಬಂಧಿಸಲು ನಿಮ್ಮ ಕೈಲಿ ಆಗಲ್ವ ಎಂದು ಚಾಲೆಂಜ್ ಮಾಡುತ್ತಿದ್ದಾರೆ.