ಯಶ್ಗೆ ಬಂದಿರೋ ದಾದಾ ಸಾಹೇಬ್ ಫಾಲ್ಕೆ ಅವಾರ್ಡ್ ಮತ್ತು ಅಣ್ಣಾವ್ರಿಗೆ ಬಂದಿದ್ದ ಅವಾರ್ಡ್ ಎರಡೂ ಒಂದೆನಾ? ಇಲ್ಲಿದೆ ಪಕ್ಕಾ ಮಾಹಿತಿ

0
830

ಭಾರತ ಚಲನಚಿತ್ರರಂಗದ ಪಿತಾಮಹ ಎಂದೇ ಕರೆಯಲ್ಪಡುವ ದಾದಾಸಾಹೇಬ್ ಫಾಲ್ಕೆ ಅವರ ಹೆಸರಿನಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರತಿವರ್ಷವೂ ಒಬ್ಬ ಗಣ್ಯ ವ್ಯಕ್ತಿಗೆ ಅಂದರೆ ಜೀವಮಾನ ಶ್ರೇಷ್ಠ ಸಾಧನೆ ಮಾಡಿದ ಒಬ್ಬ ಸಾಧಕರಿಗೆ ನೀಡಲಾಗುತ್ತದೆ. ಅಂತಹ ಭಾರತದ ಒಂದು ಶ್ರೇಷ್ಠ ಪ್ರಶಸ್ತಿಯನ್ನು ಕರ್ನಾಟಕದ ಸಿನಿಮಾ ನಟರೊಬ್ಬರಿಗೆ ನೀಡಲಾಗಿತ್ತು. ಅದುವೆ ಕನ್ನಡ ಚಲನಚಿತ್ರರಂಗದ ಅಣ್ಣಾವ್ರು ಡಾಕ್ಟರ್ ರಾಜ್ಕುಮಾರ್ ಅವರಿಗೆ. 1995 ರಲ್ಲಿ ರಾಜಣ್ಣನವರಿಗೆ 43 ನೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇನ್ನು ಅಣ್ಣಾವ್ರಿಗೆ ನೀಡಿದ ಆ ದಾದ ಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು ಖುದ್ದು ಕೇಂದ್ರ ಸರ್ಕಾರವೇ ನೀಡುವಂತಹ ಪ್ರಶಸ್ತಿ. ಇನ್ನು ಈ ವರ್ಷ ಯಶ್ ಅವರಿಗೆ ಇದೇ ಹೆಸರಿನ ಪ್ರಶಸ್ತಿಯೊಂದು ಲಭಿಸಿದೆ ಆದರೆ ಯಶ್ ಅವರಿಗೆ ನೀಡಲಾಗಿರುವ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಕೊಟ್ಟಿಲ್ಲ ಬದಲಾಗಿ ಪ್ರೈವೇಟ್ ಕಂಪನಿಯೊಂದು ನಡೆಸಿದ್ದ ಅವಾರ್ಡ್ ಇವೆಂಟ್ ನಲ್ಲಿ ಯಶ್ ಅವರಿಗೆ ಈ ಒಂದು ಪ್ರಶಸ್ತಿ ಲಭಿಸಿದೆ ಅಷ್ಟೇ. ಇನ್ನು ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು ವರ್ಷಕ್ಕೆ ಒಬ್ಬರಿಗೆ ಮಾತ್ರ ನೀಡಲಾಗುತ್ತದೆ ಆದರೆ ಯಶ್ ಅವರ ಜೊತೆ ಇನ್ನೂ ಮುಂತಾದ ಕಲಾವಿದರಿಗೆ ಅಂದರೆ ತೆಲುಗಿನ ಮಹೇಶ್ ಬಾಬು ಹಾಗೂ ಇನ್ನಿತರರಿಗೂ ಸೇರಿಸಿ ಪ್ರಶಸ್ತಿ ನೀಡಲಾಗಿದೆ.

ಇನ್ನು ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕೆಲ ಜನ ಅಣ್ಣಾವ್ರಿಗೆ ನೀಡಿದ್ದ ಅವಾರ್ಡ್ ಅನ್ನು ಇದೀಗ ಎಷ್ಟು ವರಿಗೂ ನೀಡಿದ್ದಾರೆ ಎಂದು ಸುಳ್ಳು ಮಾಹಿತಿಗಳನ್ನು ಹಬ್ಬಿಸುತ್ತಿದ್ದಾರೆ. ಆದರೆ ಅಣ್ಣಾವ್ರಿಗೆ ನೀಡಿದ್ದ ಅವಾರ್ಡ್ ಕೇಂದ್ರ ಸರ್ಕಾರ ನೀಡುವ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ. ಯಶ್ ಅವರಿಗೆ ಬಂದಿರುವ ಅವಾರ್ಡ್ ಖಾಸಗಿ ಕಂಪನಿಯೊಂದು ನಡೆಸಿದ ಸಿನಿಮಾ ಅವಾರ್ಡ್ ಅಷ್ಟೇ.

LEAVE A REPLY

Please enter your comment!
Please enter your name here