ನಿತ್ಯ ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ..! ಆದರೆ ಈ ಕೆಲಸ ಮಾಡ್ಬೇಡಿ!

Date:

ನಿತ್ಯ ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ..! ಆದರೆ ಈ ಕೆಲಸ ಮಾಡ್ಬೇಡಿ!

ಮುಂಜಾನೆ ನಮ್ಮ ದಿನದ ಅತ್ಯಂತ ಪವಿತ್ರ ಸಮಯ. ಈ ಸಮಯದಲ್ಲಿ ಮನಸ್ಸು ಶಾಂತವಾಗಿದ್ದು, ಮೆದುಳು ಅತ್ಯಂತ ಸೂಕ್ಷ್ಮವಾಗಿರುತ್ತದೆ. ಆದ್ದರಿಂದ, ಬೆಳಿಗ್ಗೆ ಎದ್ದ ತಕ್ಷಣ ಮಾಡುತ್ತಿರುವ ಕೆಲಸಗಳು ಮತ್ತು ನೋಡುತ್ತಿರುವ ದೃಶ್ಯಗಳು ನಮ್ಮ ದಿನದ ಶಕ್ತಿ, ಮನಸ್ಥಿತಿ ಹಾಗೂ ಅದೃಷ್ಟದ ಮೇಲೆ ಪ್ರಭಾವ ಬೀರುತ್ತವೆ.

ಮುಂಜಾನೆಯನ್ನು ಹೀಗೆ ಆರಂಭಿಸಿ

ಕೈಗಳನ್ನು ಉಜ್ಜಿ ನೋಡಿ: ಎದ್ದ ತಕ್ಷಣ ನಿಮ್ಮ ಎರಡೂ ಕೈಗಳನ್ನು ಉಜ್ಜಿ ನೋಡಿ, ದೇವರನ್ನು ಸ್ಮರಿಸಿ ಮತ್ತು ಭೂಮಾತೆಗೆ ನಮಸ್ಕರಿಸಿ. ಇದು ದಿನದ ಶುಭಾರಂಭಕ್ಕೆ ಸಹಾಯಕ.

ಸೂರ್ಯನ ಪೂಜೆ: ಉದಯಿಸುತ್ತಿರುವ ಸೂರ್ಯನನ್ನು ನೋಡಿ, ಸ್ನಾನದ ನಂತರ ಅವನಿಗೆ ಅರ್ಘ್ಯ ಅರ್ಪಿಸಿ. ಇದು ದೀರ್ಘಾಯುಷ್ಯ ಮತ್ತು ಶಕ್ತಿಯನ್ನು ನೀಡುತ್ತದೆ.

ಇಷ್ಟದೇವರ ಪೂಜೆ: ಸ್ನಾನ ಮಾಡಿದ ಬಳಿಕ ನಿಮ್ಮ ಇಷ್ಟದೇವನಿಗೆ ಪ್ರಾರ್ಥನೆ ಮಾಡಿ. ಇದು ಮನಸ್ಸಿನಲ್ಲಿ ಸಂತೋಷ ಮತ್ತು ಶಾಂತಿಯನ್ನು ಉಂಟುಮಾಡುತ್ತದೆ.

ಮಂಗಳಕರ ಶಬ್ಧಗಳು: ಬೆಳಿಗ್ಗೆ ಪಕ್ಷಿಗಳ ಚಿಲಿಪಿಲಿ ಅಥವಾ ಮಕ್ಕಳ ನಗು ಕೇಳುವುದು ವಾಸ್ತುಶಾಸ್ತ್ರದ ಪ್ರಕಾರ ಅತ್ಯಂತ ಶುಭಕರ.

ಬೆಳಿಗ್ಗೆ ಎದ್ದ ತಕ್ಷಣ ಮಾಡಬಾರದ ಕೆಲಸಗಳು

ಕನ್ನಡಿಯಲ್ಲಿ ನೋಡುವುದು: ಎದ್ದ ತಕ್ಷಣ ಕನ್ನಡಿಯನ್ನು ನೋಡುವುದು ಅಶುಭ ಎನ್ನಲಾಗಿದೆ. ಇದು ನಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸುತ್ತದೆ.

ಇತರರ ಮುಖ ನೋಡುವುದು: ಬೆಳಿಗ್ಗೆ ಮೊದಲು ಯಾರಾದರೂ ವ್ಯಕ್ತಿಯ ಅಥವಾ ಪ್ರಾಣಿಯ ಮುಖ ನೋಡುವುದನ್ನು ತಪ್ಪಿಸಿ. ಬದಲಿಗೆ ನಿಮ್ಮ ಕೈಗಳನ್ನು ನೋಡಿ ದೇವರನ್ನು ಸ್ಮರಿಸಿ.

ಅಳುವ ಶಬ್ಧಗಳು: ಬೆಳಿಗ್ಗೆ ಅಳುವ ಶಬ್ಧ ಅಥವಾ ದುಃಖದ ದೃಶ್ಯಗಳನ್ನು (ಟಿವಿ, ರೇಡಿಯೋ ಮುಂತಾದವುಗಳಲ್ಲಿ) ನೋಡುವುದು ಅಶುಭ ಶಕುನ.

ಬೆಳಿಗ್ಗೆ ಮನಸ್ಸಿಗೆ ವಿಶ್ರಾಂತಿ ನೀಡಿ

ಎದ್ದ ತಕ್ಷಣ ಮೆದುಳಿಗೆ ಒತ್ತಡ ನೀಡಬೇಡಿ. ಸ್ವಲ್ಪ ಸಮಯ ಶಾಂತವಾಗಿ ಕುಳಿತು, ನಂತರ ಪತ್ರಿಕೆ ಓದುವುದು ಅಥವಾ ಟಿವಿ ನೋಡುವುದು ಉತ್ತಮ.

ಬೆಳಿಗ್ಗೆ ಸರಿಯಾದ ರೀತಿಯಲ್ಲಿ ದಿನವನ್ನು ಆರಂಭಿಸುವುದರಿಂದ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಶುಭ ಫಲಗಳು ದೊರೆಯುತ್ತವೆ.

Share post:

Subscribe

spot_imgspot_img

Popular

More like this
Related

ಮಹಿಳಾ ಮೀಸಲಾತಿ ಕೊಡಬೇಕು ಎಂದು ಒತ್ತಾಯಿಸಿಸುವವರಲ್ಲಿ ನಾವು ಮುಂಚೂಣಿಯಲಿದ್ದೇವೆ: ಸಿದ್ದರಾಮಯ್ಯ

ಮಹಿಳಾ ಮೀಸಲಾತಿ ಕೊಡಬೇಕು ಎಂದು ಒತ್ತಾಯಿಸಿಸುವವರಲ್ಲಿ ನಾವು ಮುಂಚೂಣಿಯಲಿದ್ದೇವೆ: ಸಿದ್ದರಾಮಯ್ಯ ಹಾಸನ: ಮಹಿಳಾ...

ರಾಜ್ಯ ಸರ್ಕಾರದ ಬೆಂಬಲವಿಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ: ಹೆಚ್.ಡಿ. ಕುಮಾರಸ್ವಾಮಿ

ರಾಜ್ಯ ಸರ್ಕಾರದ ಬೆಂಬಲವಿಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ: ಹೆಚ್.ಡಿ. ಕುಮಾರಸ್ವಾಮಿ ಮಂಡ್ಯ: ರಾಜ್ಯ...

ನ್ಯಾಷನಲ್ ಹೆರಾಲ್ಡ್ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್ ನೀಡಿದೆ: ಡಿ.ಕೆ. ಶಿವಕುಮಾರ್

ನ್ಯಾಷನಲ್ ಹೆರಾಲ್ಡ್ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್ ನೀಡಿದೆ: ಡಿ.ಕೆ....

ರಾಜ್ಯದೆಲ್ಲೆಡೆ ಒಣ ಹವೆಯ ವಾತಾವರಣ; ಬೆಂಗಳೂರಿನಲ್ಲಿ ಚಳಿಯ ಮುನ್ಸೂಚನೆ

ರಾಜ್ಯದೆಲ್ಲೆಡೆ ಒಣ ಹವೆಯ ವಾತಾವರಣ; ಬೆಂಗಳೂರಿನಲ್ಲಿ ಚಳಿಯ ಮುನ್ಸೂಚನೆ ಬೆಂಗಳೂರು: ಕರಾವಳಿ ಹಾಗೂ...