ನಿನ್ನೆ ಆಟೋ ಡ್ರೈವರ್, ಇಂದು 12 ಕೋಟಿ ಒಡೆಯ

Date:

ಜೀವನದಲ್ಲಿ ಏನೇನೋ ಕನಸುಗಳು ಇರ್ತವೆ, ಆದ್ರೆ ಅದನ್ನೆಲ್ಲಾ ಪೂರೈಸಿಕೊಳ್ಳಲು ಕೈಯಲ್ಲಿ ಕಾಸು ಇರಬೇಕು ನೋಡಿ. ಆದ್ರೆ ಅಷ್ಟು ದೊಡ್ಡ ಮೊತ್ತದ ಹಣ ದುಡಿದು ಸಂಪಾದಿಸೋಕೆ ಸ್ವಲ್ಪ ಕಷ್ಟವಾದರೂ, ಕೆಲವರಿಗೆ ಲಕ್ ಸಾಥ್ ಕೊಟ್ಟುಬಿಡುತ್ತೆ. ಹೌದು, ಇಡೀ ದೇಶದ ಗಮನ ಸೆಳೆಯುವ ‘ತಿರುವೋಣಂ ಬಂಪರ್’ ಲಾಟರಿ ಮತ್ತೆ ಹವಾ ಎಬ್ಬಿಸಿದೆ. ಈ ಬಾರಿ ‘ತಿರುವೋಣಂ ಬಂಪರ್’ ಲಾಟರಿ ಗೆದ್ದ ಅದೃಷ್ಟಶಾಲಿ ಆಟೋ ಡ್ರೈವರ್ ಆಗಿದ್ದು, ರಾತ್ರೋ ರಾತ್ರಿ ಬಡ ವ್ಯಕ್ತಿ ಕೋಟ್ಯಾಧಿಪತಿ ಆಗಿದ್ದಾನೆ.

 

12 ಕೋಟಿ ರೂಪಾಯಿ ಮುಖಬೆಲೆಯ ತಿರುವೋಣಂ ಬಂಪರ್ ಲಾಟರಿಯನ್ನು ಎರ್ನಾಕುಲಂ ಮೂಲದ ಜಯಪಾಲನ್ ಗೆದ್ದಿದ್ದಾರೆ. ಆಟೋರಿಕ್ಷಾ ಓಡಿಸುತ್ತಾ ಸಂಕಷ್ಟದಲ್ಲಿ ಜೀವನ ಸಾಗಿಸ್ತಿದ್ದ ಜಯಪಾಲನ್‌ಗೆ ದಿಢೀರ್ ಅದೃಷ್ಟ ಒಲಿದು ಬಂದಿದೆ. ಸಾಕಷ್ಟು ಜನರಿಗೆ ಲಕ್ ತಂದಿರುವ ಮೀನಾಕ್ಷಿ ಲಕ್ಕಿ ಸೆಂಟರ್‌ನಲ್ಲಿ ಜಯಪಾಲನ್‌ ಲಾಟರಿ ಖರೀದಿ ಮಾಡಿದ್ದರು ಎನ್ನಲಾಗಿದೆ. 12 ಕೋಟಿ ರೂ. ಮೊತ್ತ ಲಾಟರಿಯಲ್ಲಿ ತೆರಿಗೆ ಎಲ್ಲಾ ಕಳೆದು ಸುಮಾರು 7.4 ಕೋಟಿ ರೂಪಾಯಿ ಜಯಪಾಲನ್‌ಗೆ ಸಿಗಲಿದೆ.

ಲಾಟರಿ ಟಿಕೆಟ್ ಪಡೆದಿದ್ದ ಜಯಪಾಲನ್‌ಗೆ ತನ್ನ ಟಿಕೆಟ್ ಫ್ಯಾನ್ಸಿ ನಂಬರ್ ಅನ್ನೋದು ತಿಳಿದಿರಲಿಲ್ಲ. ಟಿಕೆಟ್ ಸಂಖ್ಯೆ TE 645465 ಲಾಟರಿ ಗೆದ್ದಿದೆ ಎಂದು ಘೋಷಿಸಲಾಗಿತ್ತು. ವಿಚಾರ ತಿಳಿಯುತ್ತಿದ್ದಂತೆ ಜಯಪಾಲನ್‌ ಕುಣಿದು ಕುಪ್ಪಳಿಸಿದ್ದಾರೆ. ಅಲ್ಲದೆ ಇಷ್ಟು ದಿನಗಳ ಕಷ್ಟ ಬಗೆಹರಿಯಿತು ಅಂತಾ ಇಡೀ ಕುಟುಂಬ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಕೇರಳದ ‘ತಿರುವೋಣಂ ಬಂಪರ್’ ಬಡವರಿಗೆ ಒಲಿಯುವ ಅದೃಷ್ಟ ಲಕ್ಷ್ಮೀ ಅಂತಲೇ ಫೇಮಸ್. ಯಾಕಂದ್ರೆ ಈ ಹಿಂದೆ ಕೂಡ ಬಡವರಿಗೇ ಈ ಲಾಟರಿ ಒಲಿದು ಬಂದಿದೆ.

Share post:

Subscribe

spot_imgspot_img

Popular

More like this
Related

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...