ನಿಮ್ಮ ಮೊಬೈಲ್ ಗೆ ಬರುವ OTPಯನ್ನ ಬಳಸಿ, ನಿಮ್ಮ ಅಕೌಂಟ್ ನಲ್ಲಿರುವ ಹಣ ಎಗರಿಸುತ್ತಾರೆ ಹುಷಾರ್..!!
ಸದ್ಯ ಸೈಬರ್ ಕ್ರೈಮ್ ವಿಭಾಗಕ್ಕೆ ಹೆಚ್ಚೆಚ್ಚು ದೂರುಗಳು ಈ ವಿಚಾರವಾಗೆ ಬರಲಾರಂಭಿಸಿದೆ.. ಸುರಕ್ಷಿತ ವ್ಯವಹಾರಕ್ಕಾಗಿ ಓಟಿಪಿ(ಒನ್ ಟೈಮ್ ಪಾಸ್ವರ್ಡ್) ಬಳಕೆಯನ್ನ ಆನ್ ಲೈನ್ ನಲ್ಲಿ ಕಾಣಬಹುದಾಗಿದೆ.. ಆದರೆ ಇದೇ ಓಟಿಪಿಯನ್ನ ಬಳಸಿಕೊಂಡು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣವನ್ನ ತಮ್ಮ ಬ್ಯಾಂಕ್ ಅಕೌಂಟ್ ಗೆ ವರ್ಗಾವಣೆ ಮಾಡಿಕೊಳ್ಳುವ ಜಾಲ ಹೆಚ್ಚಾಗುತ್ತಿದೆ..
ಸದ್ಯ ಇವರ ಟಾರ್ಗೆಟ್ ಟೆಕ್ಕಿಗಳೆ ಆಗಿದ್ದು, ಅವರ ಲ್ಯಾಪ್‌ಟಾಪ್ ಗಳಿಗೆ ಬರುವ ಓಟಿಪಿಯನ್ನ ಹ್ಯಾಕ್ ಮಾಡಿ ಅವರ ಬ್ಯಾಂಕ್ ಖಾತೆಯಿಂದ ಹಣವನ್ನ ದೋಚುತ್ತಿರುವುದು ಪತ್ತೆಯಾಗಿದೆ.. ಈ ಹಿಂದೆ ಪೊಲೀಸರು ಈ ಬಗ್ಗೆ ಎಚ್ಚರದಿಂದಿರುವಂತೆ ತಿಳಿಸಿದ್ದಾರೆ.. ಬ್ಯಾಂಕ್ ಅಧಿಕಾರಿಗಳ ಹೆಸರಿನಲ್ಲಿ ಎಟಿಮ್ ಕಾರ್ಡ್ ವಿವರ ಕೇಳುವುದು, ಮೊಬೈಲ್ ಗೆ ಬರುವ ಓಟಿಪಿಯನ್ನ ಹೇಳುವಂತೆ ಕರೆ ಮಾಡಿ ಆನಂತರ ಅಕೌಂಟ್ ನಲ್ಲಿರುವ ಹಣವನ್ನ ಲಪಟಾಯಿಸುತ್ತಾರೆ.. ಹೀಗಾಗೆ ಈ ವಿಚಾರದಲ್ಲಿ ಯಾರಿಗೆ ಆದರು ನಿಮ್ಮ ಬ್ಯಾಂಕ್ನ ವಿವರಗಳನ್ನ ನೀಡದೆ ಇದ್ದರೆ ಒಳಿತು..