ನಿಮ್ಮ ಕಣ್ಣಿನ ಆರೋಗ್ಯ ಹೆಚ್ಚಿಸಲು ಪ್ರತಿದಿನ ಬಾಳೆ ಹಣ್ಣು ಸೇವಿಸಿ ಸಾಕು.!
ಬಾಳೆಹಣ್ಣು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ, ಹೊಟ್ಟೆ ಹಸಿದರೂ , ಹೊಟ್ಟೆ ತುಂಬಿದ ಬಳಿಕವೂ ಹೀಗೆ ಯಾವ ಸಮಯದಲ್ಲಿ ಬೇಕಾದರೂ ತಿನ್ನಬೇಕೆನಿಸುವ ಹಣ್ಣು ಇದಾಗಿದೆ. ಬಾಳೆ ಹಣ್ಣಿನಲ್ಲಿ ಕಬ್ಬಿಣದ ಅಂಶ ಬಹಳಷ್ಟಿದೆ. ಮೊದಲೇ ಖಾಲಿ ಹೊಟ್ಟೆ ಬೇರೆ. ಇಂತಹ ಸಮಯದಲ್ಲಿ ಬಾಳೆ ಹಣ್ಣು ತಿಂದರೆ ದೇಹಕ್ಕೆ ಕಬ್ಬಿಣದ ಅಂಶಗಳು ಚೆನ್ನಾಗಿ ಹೀರಿಕೊಂಡು ದೇಹದಲ್ಲಿ ರಕ್ತದ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸಿಕೊಂಡರೆ ಅನೀಮಿಯಾ ರೋಗದಿಂದ ಬಹಳ ಬೇಗನೆ ಮುಕ್ತಿ ಪಡೆಯಬಹುದು.
ಅದಲ್ಲದೆ ಈ ಬಾಳೆ ಹಣ್ಣು ನಿಮ್ಮ ಕಣ್ಣಿನ ಆರೋಗ್ಯವನ್ನೂ ಕಾಪಾಡುತ್ತೆ. ಕ್ವೀನ್ಸ್‌ಲ್ಯಾಂಡ್‌ನಲ್ಲಿ ನಡೆದ ಅಧ್ಯಯನದಲ್ಲಿ ಬಾಳೆ ಹಣ್ಣು ಸೇವನೆ ಕಣ್ಣಿನ ಆರೋಗ್ಯಕ್ಕೆ ಸಹಕಾರಿ ಎಂಬುದು ತಿಳಿದುಬಂದಿದೆ. ಬಾಳೆಹಣ್ಣಿನಲ್ಲಿರುವ ಕೆರೊಟೆನಾಯ್ಡ್ ಕಣ್ಣಿನ ದೃಷ್ಟಿಗೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಕೆರೊಟೆನಾಯ್ಡ್ ಎಂದರೆ ಹಣ್ಣಿನಲ್ಲಿ ಹಳದಿ, ಕೆಂಪು, ಕೇಸರಿ ಬಣ್ಣಕ್ಕೆ ಕಾರಣವಾಗುವ ಒಂದು ಅಂಶ. ಅವುಗಳು ಸಸ್ಯದ ಆರೋಗ್ಯಕ್ಕೂ ಬಹಳ ಸಹಕಾರಿ.
ಕೆರೊಟೆನಾಯ್ಡ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವವರು ಹೆಚ್ಚಿನ ಆರೋಗ್ಯ ಪ್ರಯೋಜನ ಪಡೆಯುತ್ತಾರೆ ಎಂಬುದು ಆಹಾರ ತಜ್ಞರ ಅಭಿಪ್ರಾಯ. ಬಾಳೆಹಣ್ಣುಗಳನ್ನು 107 ದೇಶಗಳಲ್ಲಿ ಬೆಳೆಯಲಾಗುತ್ತದೆ ಮತ್ತು ವಿಶ್ವದ ಅತ್ಯುತ್ತಮ ಆಹಾರ ಬೆಳೆಗಳಲ್ಲಿ ಒಂದಾಗಿದೆ ಬಾಳೆ ಹಣ್ಣು. ಬಾಳೆಹಣ್ಣಿನಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ಇದು ದೃಷ್ಟಿಯ ಆರೋಗ್ಯಕ್ಕೆ ಅತ್ಯುತ್ತಮ. ಕೆಲವು ಆಹಾರಗಳಲ್ಲಿ ಹೆಚ್ಚಿನ ಕೆರೊಟೆನಾಯ್ಡ್ ಎಂದು ಹೇಳಲಾಗುತ್ತದೆ. ಇದು ಕ್ಯಾನ್ಸರ್, ಮಧುಮೇಹ ಮತ್ತು ಹೃದಯ ಸಂಬಂಧಿತ ಕಾಯಿಲೆಗಳಂತಹ ದೀರ್ಘಕಾಲದ ಕಾಯಿಲೆಗಳ ವಿರುದ್ಧ ಹೋರಾಡಲು ನಮ್ಮ ದೇಹಕ್ಕೆ ಸಹಕಾರಿ