ನಿಯಂತ್ರಣ ತಪ್ಪಿದ ಚೀನಾ ರಾಕೆಟ್ ಎಲ್ಲಿ ಪತನವಾಗುತ್ತೆ?

Date:

ನಿಯಂತ್ರಣ ಕಳೆದುಕೊಂಡಿರುವ ಚೀನಾದ ರಾಕೆಟ್ ಯಾವುದೇ ಕ್ಷಣ ಬೇಕಾದರೂ ಭೂಮಿಗೆ ಅಪ್ಪಳಿಸುವ ಸಾಧ್ಯತೆಯಿದೆ. ಇದು ಆತಂಕಕ್ಕೆ ಕಾರಣವಾಗಿದ್ದರೂ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದು, ಟ್ವಿಟರ್‌ನಲ್ಲಿ ವಿಶ್ವದಾದ್ಯಂತ ಟ್ರೆಂಡ್ ಆಗಲು ಕಾರಣವಾಗಿದೆ.
22 ಟನ್ ಭಾರ ಹಾಗೂ 100 ಅಡಿ ಎತ್ತರದ ಚೀನಾದ ಲಾಂಗ್ ಮಾರ್ಚ್-5ಬಿ ರಾಕೆಟ್‌‌ನ ಭಗ್ನಾವಶೇಷ ವಾರಾಂತ್ಯದಲ್ಲಿ ಭೂಮಿಗೆ ಪತನವಾಗಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಚೀನಾದ ಮಹತ್ವಕಾಂಕ್ಷೆಯ ಶಾಶ್ವತ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ಯೋಜನೆಯ ಭಾಗವಾಗಿ ಏಪ್ರಿಲ್ 29ರಂದು ಮೊದಲ ಮಾಡ್ಯೂಲ್ ಅನ್ನು ಕಕ್ಷೆಗೆ ಉಡಾಯಿಸಿತ್ತು.

ಏತನ್ಮಧ್ಯೆ ರಾಕೆಟ್ ಭಗ್ನಾವಶೇಷ ಭೂಮಿಗೆ ಯಾವುದೇ ಹಾನಿಯನ್ನುಂಟು ಮಾಡಲಾರದು ಎಂದು ಚೀನಾ ಹೇಳಿದೆ. ರಾಕೆಟ್ ಅವಶೇಷ ಭೂಮಿಗೆ ಪತನವಾಗುವ ಮುನ್ನವೇ ನಾಶವಾಗಬಹುದು. ಸುಟ್ಟು ಹೋಗದಿರುವ ಭಗ್ನಾವಶೇಷಗಳು ಸಮುದ್ರಕ್ಕೆ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ವಿಶ್ಲೇಷಿಸಲಾಗಿದೆ.
ವಿಷಯ ಇಷ್ಟೊಂದು ಗಂಭೀರತೆ ಪಡೆದಿದ್ದರೂ ಪ್ರತಿಯೊಂದರಲ್ಲೂ ತಮಾಷೆಯನ್ನು ಹುಡುಕುತ್ತಿರುವ ಟ್ರೋಲ್ ಪ್ರಿಯರು, ಟ್ವಿಟರ್‌ನಲ್ಲಿ ಟ್ರೆಂಡ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ವಿಶ್ವದಾದ್ಯಂತ #chineserocket ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಮೀಮ್ಸ್‌ಗಳು ವೈರಲ್ ಆಗಿದೆ.

Share post:

Subscribe

spot_imgspot_img

Popular

More like this
Related

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...