No menu items!
12.4 C
Munich
Wednesday, April 29, 2026

ಚಾ.ನಗರದಲ್ಲಿ ಸತ್ತ 24 ಜನರ ಮನೆಗೆ ಬೆಳಕಾದ ಕಿಚ್ಚ

Must read

ಯಾರಾದರೂ ಅಭಿಮಾನಿಗಳು ಕಷ್ಟದಲ್ಲಿದ್ದಾರೆ ಎಂದರೆ ಕಿಚ್ಚ ಸುದೀಪ್ ಮೊದಲು ಸಹಾಯಕ್ಕೆ ಬರುತ್ತಾರೆ. ತಾನೂ ತನ್ನ ಕೆಲಸಗಳಲ್ಲಿ ಬ್ಯುಸಿ ಇರುವಂತ ಸಂದರ್ಭದಲ್ಲಿ ಅಭಿಮಾನಿಗಳಿಗೆ ತೊಂದರೆಯಾದಾಗ ಅಥವಾ ಯಾವುದಾದರೂ ಸಹಾಯ ಬೇಕಾದಾಗ ತಾನು ಅದನ್ನು ಮಾಡಲಾಗುವುದಿಲ್ಲ ಎಂಬ ಕಾರಣಕ್ಕೆ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ಎಂಬುದನ್ನು ಸುದೀಪ್ ಆರಂಭಿಸಿದ್ದಾರೆ. ಈ ಚಾರಿಟಬಲ್ ಟ್ರಸ್ಟ್ ಮೂಲಕ ತಾವು ಎಷ್ಟೇ ಬ್ಯುಸಿ ಇದ್ದರೂ ಕಷ್ಟ ಎಂದು ಸಹಾಯ ಹಸ್ತ ಅರಸಿ ಬರುವ ಜನರಿಗೆ ಸಹಾಯವನ್ನು ಮಾಡುತ್ತಿದ್ದಾರೆ.

 

 

ಇದೀಗ ಇದೇ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ಮೂಲಕ ಚಾಮರಾಜನಗರದಲ್ಲಿ ಇತ್ತೀಚೆಗೆ ಆಕ್ಸಿಜನ್ ಸಿಗದೆ ರಾತ್ರೋರಾತ್ರಿ ನಿಧನ ಹೊಂದಿದ 24 ಜನರ ಕುಟುಂಬದವರಿಗೆ ಕಿಚ್ಚ ಸುದೀಪ್ ಸಹಾಯ ಮಾಡಲು ಮುಂದಾಗಿದ್ದಾರೆ. ನಿಮಗೆಲ್ಲ ತಿಳಿದಿರುವ ಹಾಗೆ ಕಳೆದೆರಡು ವಾರಗಳಿಂದ ಕಿಚ್ಚ ಸುದೀಪ್ ಅವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಆದರೂ ಸಹ ಚಾಮರಾಜನಗರದಲ್ಲಿ ಇಂತಹ ಘಟನೆ ನಡೆದಿದೆ ಎಂದು ತಿಳಿದ ಕೂಡಲೇ ತಮ್ಮ ಚಾರಿಟಬಲ್ ಟ್ರಸ್ಟ್ ಗೆ ಅವರೇ ಕರೆ ಮಾಡಿ ಚಾಮರಾಜನಗರದಲ್ಲಿ ಈ ರೀತಿಯ ಘಟನೆ ಸಂಭವಿಸಿದ್ದು ಯಾರು ಯಾರು ಮೃತಪಟ್ಟಿದ್ದಾರೋ ಅವರೆಲ್ಲರ ಮನೆಗಳಿಗೆ ತೆರಳಿ ಅವರಿಗೆ ಯಾವ ಅಗತ್ಯತೆ ಇದೆ ಎಂಬುದನ್ನು ಕಂಡುಕೊಳ್ಳಿ ಎಂದು ಸೂಚಿಸಿದ್ದಾರೆ.

 

 

ಅಷ್ಟೇ ಅಲ್ಲದೆ ನಿಮಗೆ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ಕಡೆಯಿಂದ ಯಾವ ರೀತಿಯ ಅನುಕೂಲ ಬೇಕು ಯಾವ ರೀತಿಯ ಸಹಾಯ ಬೇಕೋ ಅದನ್ನ ಒದಗಿಸುತ್ತೇವೆ ಎಂಬ ಭರವಸೆಯನ್ನು ನೀಡಿ ಬನ್ನಿ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಇದರಂತೆಯೇ ಟ್ರಸ್ಟ್ ನ ಸದಸ್ಯರು ಮೃತಪಟ್ಟ ಸೋಂಕಿತರ ಮನೆಗಳಿಗೆ ತೆರಳಿ ಅವರಿಗೆ ಯಾವ ಸಹಾಯ ಬೇಕೋ ಅದನ್ನು ತಿಳಿದುಕೊಂಡು ಕಿಚ್ಚ ಸುದೀಪ್ ಅವರಿಗೆ ಮುಟ್ಟಿಸಿದ್ದಾರೆ. ಮನಕಲಕುವ ವಿಷಯವೇನೆಂದರೆ ಮೃತಪಟ್ಟ 24 ಮಂದಿಯು ಸಹ ತೀರಾ ಬಡ ಕುಟುಂಬದವರು.

 

 

ಅವರನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಮನೆಯವರು ಇದೀಗ ಅವರನ್ನು ಕಳೆದುಕೊಂಡು ನಾವಿಕನಿಲ್ಲದ ದೋಣಿಯಂತಾಗಿದೆ. ಈ ವಿಷಯವನ್ನೆಲ್ಲಾ ತಿಳಿದ ಕಿಚ್ಚ ಸುದೀಪ್ ಅವರು ಆ ಮೃತ ವ್ಯಕ್ತಿಗಳ ಮನೆಯವರಿಗೆ ಯಾವ ಯಾವ ಸವಲತ್ತುಗಳು ಬೇಕೋ ಅದನ್ನೆಲ್ಲಾ ಕಲ್ಪಿಸಿಕೊಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಸರ್ಕಾರದ ಉಡಾಫೆತನ, ಬೇಜವಾಬ್ದಾರಿತನದಿಂದ ಸತ್ತ ಆ 24 ಮಂದಿ ಮೃತರ ಕುಟುಂಬಕ್ಕೆ ಬೆಳಕು ನೀಡಲು ಮುಂದಾಗಿರುವ ಕಿಚ್ಚ ಸುದೀಪ್ ಅವರ ಈ ನಡೆ ನಿಜಕ್ಕೂ ಮಾನವೀಯತೆ ಇನ್ನೂ ಬದುಕಿದೆ ಎಂಬುದಕ್ಕೆ ನಿದರ್ಶನವಾಗಿದೆ.

 

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article