ನಿರ್ದೇಶನಕ್ಕಿಳಿದ ಕನ್ನಡ ಫಿಲ್ಮಿಂ ಕ್ಲಬ್ ಧೀರಜ್ ಎಂ.ವಿ…ಸಾಥ್ ಕೊಟ್ಟ ಯುವ ನಿರ್ದೇಶಕರ ತಂಡ

Date:

*ನಿರ್ದೇಶನಕ್ಕಿಳಿದ ಕನ್ನಡ ಫಿಲ್ಮಿಂ ಕ್ಲಬ್ ಧೀರಜ್ ಎಂ.ವಿ…ಸಾಥ್ ಕೊಟ್ಟ ಯುವ ನಿರ್ದೇಶಕರ ತಂಡ*

*ಹೊಸಬರ ಸಿನಿಮಾಗೆ ಸಾಥ್ ಕೊಟ್ಟ ಸ್ಯಾಂಡಲ್ ವುಡ್ ಭರವಸೆ ನಿರ್ದೇಶಕರು.. ಕನ್ನಡ ಫಿಲ್ಮಿಂ ಕ್ಲಬ್ ಧೀರಜ್ ಈಗ ನಿರ್ದೇಶಕರು*

ಸಿನಿಮಾಪ್ರೇಮಿಗಳಿಗಾಗಿ ಕನ್ನಡ ಫಿಲ್ಮಿಂ ಕ್ಲಬ್ ‘ಮೀಟ್ಸ್ ಅಂಡ್ ಗ್ರೀಟ್ಸ್’ ಎಂಬ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದು, ಈಗಾಗಲೇ 33ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದೆ. ಕನ್ನಡ ಫಿಲ್ಮಿಂ ಕ್ಲಬ್ ನಡೆದ ‘ಮೀಟ್ಸ್ ಅಂಡ್ ಗ್ರೀಟ್ಸ್’ಗೆ ಹೇಮಂತ್ ರಾವ್, ಮಂಸೋರೆ, ಆರ್.ಜೆ. ಪ್ರದೀಪ್, ರೂಪಾ ರಾವ್, ಕಿರಣ್ ರಾಜ್ ಹಲವರು ಸಾಥ್ ಕೊಟ್ಟಿದ್ದಾರೆ. ಕನ್ನಡ ಸಿನಿಮಾಗಳ ಪ್ರಚಾರಕ್ಕೆ ಕೈ ಜೋಡಿಸಿರುವ ಕನ್ನಡ ಫಿಲ್ಮಿಂ ಕ್ಲಬ್ ಸಂಸ್ಥಾಪಕ ಧೀರಜ್ ಎಂ.ವಿ ಈಗ ಚಿತ್ರ ನಿರ್ದೇಶನಕ್ಕಿಳಿದಿದ್ದಾರೆ.

ಪತ್ರಕರ್ತರು ಹಾಗೂ ಹಲವು ಸಾಕ್ಷ್ಯ ಚಿತ್ರಗಳನ್ನು ನಿರ್ದೇಶಿಸಿರುವ, ಒಂದಷ್ಟು ನಿರ್ದೇಶಕರ ಗರಡಿಯಲ್ಲಿ ನಿರ್ದೇಶನದ ಪಟುಗಳನ್ನು ಕಲಿತಿರುವ ಧೀರಜ್ ಎಂ.ವಿ ಈಗ ಸ್ವಾತಂತ್ರ ನಿರ್ದೇಶಕರಾಗಿ ಹೆಜ್ಜೆ ಇಡುತ್ತಿದ್ದಾರೆ. ಅವರ ಮೊದಲ ಪ್ರಯತ್ನದ ಸಿನಿಮಾದ ಮುಹೂರ್ತ ಸಮಾರಂಭ ಬೆಂಗಳೂರಿನ ವಿದ್ಯಾಪೀಠದಲ್ಲಿರುವ ರಾಯರ ಮಠದಲ್ಲಿ ನೆರವೇರಿದೆ. ಕನ್ನಡ ಚಿತ್ರರಂಗದ ಭರವಸೆ ನಿರ್ದೇಶಕರಾದ ಮಹಿರಾ ಸಿನಿಮಾ ಖ್ಯಾತಿಯ ಮಹೇಶ್ ಗೌಡ, ಮೇಡ್ ಇನ್ ಬೆಂಗಳೂರು ಸಾರಥಿ ಪ್ರದೀಪ್ ಶಾಸ್ತ್ರಿ¸ ನಿಮಿತ್ತ ಮಾತ್ರಾ ನಿರ್ದೇಶಕ ರೋಷನ್, ರಾವಣರಾಜ್ಯದಲ್ಲಿ ನವದಂಪತಿಗಳು ಚಿತ್ರದ ನಿರ್ದೇಶಕ ರಂಗ, ಡೇರ್‌ಡೆವಿಲ್ ಮುಸ್ತಫಾ ಖ್ಯಾತಿಯ ಶಶಾಂಕ್ ಸೋಘಲ್ ಸೇರಿದಂತೆ ಹಲವಾರು ಯುವ ತಂಡಕ್ಕೆ ಬೆಂಬಲ ಕೊಟ್ಟು ಶುಭ ಹಾರೈಸಿದ್ದಾರೆ.

ಐಟಿ ಉದ್ಯಮಿಯಾಗಿರುವ ಅರ್ಜುನ್ ಗೌಡ ವಿಎಸ್ ಕೆ ಸಿನಿಮಾಸ್ ಬ್ಯಾನರ್ ನಡಿ ಇನ್ನೂ ಹೆಸರಿಡದ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ವೀರೇಶ್ ಎನ್ ಟಿಎ ಕ್ಯಾಮೆರಾ ಹ್ಯಾಂಡಲ್ ಮಾಡುತ್ತಿದ್ದಾರೆ. ಸದ್ಯ ಮುಹೂರ್ತ ಮುಗಿಸಿ ಚಿತ್ರತಂಡ ಉತ್ತರ ಕರ್ನಾಟದ ಭಾಗದಲ್ಲಿ ಚಿತ್ರೀಕರಣ ಶುರು ಮಾಡಿದೆ. ಶೀಘ್ರದಲ್ಲೇ ಉಳಿದ ತಾರಾಬಳಗ ಹಾಗೂ ತಾಂತ್ರಿಗ ವರ್ಗದ ಬಗ್ಗೆ ಮಾಹಿತಿ ನೀಡಲಿದೆ.

Share post:

Subscribe

spot_imgspot_img

Popular

More like this
Related

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ದಟ್ಟಣೆ

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ...

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ ಏನು..?

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ...

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ...