ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಬಗ್ಗೆ ಹಲವು ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ.ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಅವರಿಗೆ ಅನುಭವದ ಕೊರತೆ ಇರಬೇಕು. ಅವರಿಗೆ ಅಧಿಕಾರಿಗಳು ಸರಿಯಾಗಿ ಮಾರ್ಗದರ್ಶನ ನೀಡಿಲ್ಲ ಅನಿಸುತ್ತೆ ಎಂದು ಹೇಳಿದ್ದಾರೆ.
ವಿತ್ತ ಸಚಿವರಿಗೆ ಮೋದಿ ಸರಿಯಾಗಿ ಮಾರ್ಗದರ್ಶನ ನೀಡಿಲ್ಲ ಅನಿಸುತ್ತೆ. ದಲಿತರು, ಅಲ್ಪಸಂಖ್ಯಾತರ ಬಗ್ಗೆ ಒಂದೇ ಒಂದು ಶಬ್ದ ಬಜೆಟ್ ನಲ್ಲಿ ಇಲ್ಲ. ಹಿಂದುಳಿದ ಸಮುದಾಯ ಮೇಲೆತ್ತಲು ಏನು ಮಾಡಿದ್ದೀರಿ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಇದು ಅತಿ ಕೆಟ್ಟ ಬಜೆಟ್ ಆಗಿದೆ ಎಂದು ಟೀಕಿಸಿರುವ ಪರಮೇಶ್ವರ್, ಇತ್ತೀಚಿನ ದಿನಗಳಲ್ಲಿ ಇಷ್ಟೊಂದು ಕೆಟ್ಟ ಬಜೆಟ್ ಕೇಂದ್ರದಿಂದ ಬಂದಿರಲಿಲ್ಲ.ಗ್ರಾಮೀಣಾಭಿವೃದ್ಧಿಗೆ ಆದ್ಯತೆ ನೀಡಿಲ್ಲ. ರಾಜ್ಯದ ಮಟ್ಟಿಗಂತೂ ಇದು ನಿರಾಶಾದಾಯಕ ಬಜೆಟ್ ಆಗಿದೆ ಎಂದು ಟೀಕಿಸಿದ್ದಾರೆ.