ನಿವೃತ್ತಿಯಾದ ಆಸೀಸ್ ಕ್ರಿಕೆಟರ್ ಎನ್ ಮಾಡ್ತಿದ್ದಾರೆ ಗೊತ್ತಾ..?

Date:

ಕ್ರಿಕೆಟರ್ಸ್ ನಿವೃತ್ತಿ ನಂತರ ಏನ್ಮಾಡ್ತಾರೆ ಹೇಳಿ..? ವೀಕ್ಷಣೆ ವಿವರಣೆಕಾರರಾಗಿ ಕಾರ್ಯನಿರ್ವಹಿಸುತ್ತಾರೆ ಅಥವಾ ಅಕಾಡೆಮಿ ಆರಂಭಿಸಿ ಯುವ ಕ್ರಿಕೆಟರ್ಸ್ಗೆ ಮಾರ್ಗದರ್ಶನ ನೀಡ್ತಾರೆ. ಇನ್ನು ಕೆಲವರು ಕುಟುಂಬದೊಂದಿಗೆ ಕಾಲ ಕಾಳೆಯುತ್ತಾರೆ. ಆದ್ರೆ, ಆಸ್ಟ್ರೇಲಿಯಾ ಮಾಜಿ ಕ್ರಿಕೆಟರ್ ಜಾನ್ ಹಾಸ್ಟಿಂಗ್ಸ್, ಕಾಫಿ ಕೆಫೆಯೊಂದರ ಓನರ್ ಆಗಿದ್ದಾರೆ. ಕ್ರಿಕೆಟ್ನಿಂದ ದೂರ ಆದ ನಂತರ ತಮ್ಮದೇ ಆದ ಕಾಫಿ ಕೆಫೆಯನ್ನ ತೆರೆದು ಬದುಕಿಗಾಗಿ ಹೊಸ ದಾರಿ ಹುಡುಕಿಕೊಂಡಿದ್ದಾರೆ.

ಆಸಿಸ್ ತಂಡದ ವೇಗದ ಬೌಲರ್ ಆಗಿದ್ದ ಹಾಸ್ಟಿಂಗ್ಸ್, ಪತ್ನಿ ಬ್ರಿಯಾನನ್ ಜೊತೆ ಸೇರಿ ಮಿಸ್ಟರ್ ಫ್ರಾಂಕಿ ಎಂಬ ಕೆಫೆ ನಡೆಸುತ್ತಿದ್ದಾರೆ. ಆರೋಗ್ಯ ಸಮಸ್ಯೆಯಿಂದಾಗಿ(ಶ್ವಾಸಕೋಶ ರಕ್ತಸ್ರಾವ) ಕಳೆದ ವರ್ಷ ಕ್ರಿಕೆಟ್ಗೆ ಹಾಸ್ಟಿಂಗ್ಸ್ ವಿದಾಯ ಹೇಳಿದ್ರು. ಕ್ರಿಕೆಟ್ಗೆ ಗುಡ್ ಬೈ ಹೇಳಿದ ಮೇಲೆ ಕೆಫೆ ನಡೆಸಬೇಕೆಂದು ನಿರ್ಧರಿಸಿದ್ದ ಹಾಸ್ಟಿಂಗ್ಸ್, ಅದರಂತೆ ವಿಕ್ಟೋರಿಯಾ ರಾಜ್ಯದ ಸೌಥ್ ಫ್ರಾಂಕ್ಟನ್ ನಗರದಲ್ಲಿ ಕೆಫೆ ಆರಂಭಿಸುವುದರ ಮೂಲಕ, ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.ಆಸ್ಟ್ರೇಲಿಯಾ ಪರ ಹಾಸ್ಟಿಂಗ್ಸ್, 29 ಏಕದಿನ 9 ಟಿ20 ಹಾಗು 1 ಟೆಸ್ಟ್ ಪಂದ್ಯವನ್ನ ಆಡಿದ್ದಾರೆ.

Share post:

Subscribe

spot_imgspot_img

Popular

More like this
Related

ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಒಣ ಹವೆ! ಆದ್ರೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ

ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಒಣ ಹವೆ! ಆದ್ರೆ ಬೆಂಗಳೂರಿನಲ್ಲಿ ಮೋಡ ಕವಿದ...

ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದಲ್ಲೇ ಶುಭಾಶಯ ಕೋರಿದ ಪ್ರಧಾನಿ ಮೋದಿ

ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದಲ್ಲೇ ಶುಭಾಶಯ ಕೋರಿದ ಪ್ರಧಾನಿ ಮೋದಿ ನವದೆಹಲಿ: ಕನ್ನಡ ರಾಜ್ಯೋತ್ಸವ...

ಹಾಲು-ನೀರು ಸರಿಯಾದರೂ ಟೀ ರುಚಿಯಾಗಿಲ್ಲವಾ? ಹಾಗಿದ್ರೆ ತಪ್ಪು ಇಲ್ಲಿದೆ ನೋಡಿ!

ಹಾಲು-ನೀರು ಸರಿಯಾದರೂ ಟೀ ರುಚಿಯಾಗಿಲ್ಲವಾ? ಹಾಗಿದ್ರೆ ತಪ್ಪು ಇಲ್ಲಿದೆ ನೋಡಿ! ಭಾರತೀಯರ ಜೀವನದಲ್ಲಿ...

ಯುಟಿ ಖಾದರ್ ವಿರುದ್ದ ಭ್ರಷ್ಟಾಚಾರ ಆರೋಪ: ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಯಲಿ ಎಂದ ವಿಶ್ವೇಶ್ವರ ಹೆಗಡೆ ಕಾಗೇರಿ

ಯುಟಿ ಖಾದರ್ ವಿರುದ್ದ ಭ್ರಷ್ಟಾಚಾರ ಆರೋಪ: ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಯಲಿ...