ಪರೀಕ್ಷೆ ಮಾಡಲಿ. ಯಾರು ಗಂಡಸು, ನರ ಸತ್ತವರು ಅನ್ನೋದು ತಿಳಿಯುತ್ತೆ ! ಎಂದ ಸಚಿವ ಡಿ.ಕೆ.ಶಿವಕುಮಾರ್ !? ಯಾಕೆ ಗೊತ್ತಾ?

Must read

ಕಾಂಗ್ರೆಸ್ ನವರೆಲ್ಲರೂ ನರ ಸತ್ತವರು ಅಂತ ಹೇಳಿಕೆ ನೀಡಿದ್ದ ಕೆ.ಎಸ್.ಈಶ್ವರಪ್ಪಗೆ ತಿರುಗೇಟು ನೀಡಿದ್ದಾರೆ ಸಚಿವ ಡಿಕೆಶಿ.

ನರ ಇದೆಯೋ ಸತ್ತಿದೆಯೋ ಅಂತ ಪರೀಕ್ಷೆ ಮಾಡೋ ಶಕ್ತಿ ಅವರಿಗೆ ಇದ್ದರೆ ನಮ್ಮ ಜನ ತೋರಿಸ್ತಾರೆ. ನರ, ಗಂಡಸ್ತನದ ಬಗ್ಗೆ ಪರೀಕ್ಷೆ ಕೊಟ್ಟು ನೋಡಲಿ. ಗಂಡಸ್ತನದ ಬಗ್ಗೆ ಪರೀಕ್ಷೆ ಮಾಡಲಿ. ಯಾರು ಗಂಡಸು, ನರ ಸತ್ತವರು ಅನ್ನೋದು ತಿಳಿಯುತ್ತೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದಾರೆ.

ಈ ರೀತಿ ಕೆಟ್ಟದಾಗಿ ಮಾತಾಡೋದೇ ಈಶ್ವರಪ್ಪನ ಸಂಸ್ಕೃತಿ ಎಂದು ಟೀಕೆ ಮಾಡಿದ್ರು.
ಮೈತ್ರಿ ಅಸಮಾಧಾನದ ಬಗ್ಗೆ ದೇವೇಗೌಡರು ರಾಹುಲ್ ಗಾಂಧಿಗೆ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಯಾವ ಪತ್ರ ವ್ಯವಹಾರವೂ ಆಗಿಲ್ಲ. ಇದು ಕೇವಲ ವದಂತಿ.ದೋಸ್ತಿ ಸರ್ಕಾರ ಕಿತ್ತೆಸೆಯೋಕೆ ಕಡಲೇಕಾಯಿ ಗಿಡ ಅಲ್ಲ‌.
20ಜನ ಶಾಸಕರು ನಮ್ಮ ಜತೆ ಇದ್ದಾರೆ ಅನ್ನೋ ಬಿಜೆಪಿಗರು, ಗೊಂದಲ ಸೃಷ್ಠಿ ಮಾಡೋದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದರು.

- Advertisement -spot_img

More articles

- Advertisement -spot_img

Latest article