ನಟಿ ರಾಧಿಕಾ ಪಂಡಿತ್ ನಿನ್ನೆಯಷ್ಟೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪತ್ನಿಯ ಹುಟ್ಟುಹಬ್ಬಕ್ಕೆ ಪತಿ ಯಶ್ ವಿಶೇಷವಾಗಿ ವಿಶ್ ಮಾಡಿದದ್ದಾರೆ.
ನಟ ಯಶ್ ಅವರು ಟ್ವೀಟ್ಟರ್, ಇನ್ ಸ್ಟಾಗ್ರಾಂನಲ್ಲಿ ಫೋಟೋ ಹಾಕಿ ಪತ್ನಿಗೆ ಪ್ರೀತಿಯಿಂದ ಶುಭಾಶಯ ತಿಳಿಸಿದ್ದಾರೆ. ಯಶ್ ಅವರು, “ಈ ಜೀವನದಲ್ಲಿ ನಾನು ಏನು ಮಾಡುತ್ತಿದ್ದೇನೆ ಎಂಬುದಕ್ಕಿಂತ, ಈ ಬದುಕಿನಲ್ಲಿ ನನ್ನ ಜೊತೆ ಯಾರಿದ್ದಾರೆ ಎಂಬುದರಿಂದ ನನ್ನ ಬದುಕು ಸುಂದರವಾಗಿದೆ. ನಿನಗೆ ಧನ್ಯವಾದ. ನೀನು ನನಗಾಗಿಯೇ ಹುಟ್ಟಿದ್ದೀಯಾ ಎಂದು ನನಗೆ ಭಾಸವಾಗುತ್ತದೆ. ಹ್ಯಾಪಿ ಬರ್ತ್ ಡೇ ಮೈ ಲವ್” ಎಂದು ಟ್ವೀಟ್ ಮಾಡಿದ್ದಾರೆ. ಪ್ರೀತಿಯ ಮಾತುಗಳ ಜೊತೆ ಇಬ್ಬರ ಒಂದು ಸುಂದರವಾದ ಫೋಟೋ ಹಾಕಿದ್ದಾರೆ. ಆ ಫೋಟೋದಲ್ಲಿ ರಾಧಿಕಾ ಅವರನ್ನು ತಮ್ಮ ಕೈಗಳಿಂದ ಯಶ್ ಅಪ್ಪಿಕೊಂಡು ಅವರನ್ನೇ ನೋಡುತ್ತಿರುವುದನ್ನು ಕಾಣಬಹುದಾಗಿದೆ.
ರಾಧಿಕಾ ಅವರು ಪ್ರತಿ ವರ್ಷ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಣೆ ಮಾಡಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಅವರು ಬೆಂಗಳೂರಿನಲ್ಲಿ ಇಲ್ಲದ ಕಾರಣ ಅವರ ಅಭಿಮಾನಿಗಳನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಈ ಬಗ್ಗೆ ಬರ್ತ್ ಡೇ ದಿನಕ್ಕೂ ಮುನ್ನವೇ ವಿಡಿಯೋ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು, ಒಟ್ಟಾರೆ ಸ್ಯಾಂಡಲ್ ವುಡ್ ನಲ್ಲಿ ಮೋಸ್ಟ್ ಹ್ಯಾಪನಿಂಗ್ ಪೇರ್ ಆಗಿರುವ ಯಶ್ ರಾಧಿಕ ಜೋಡಿ ಹೀಗೆ ಇನ್ನೂ ನೂರು ಕಾಲ ಜೊತೆಗಿರಲಿ ಅನ್ನೋದು ಎಲ್ಲರ ಹಾರೈಕೆ.