ದೇಶದಾದ್ಯಂತ ಜನರು ದಿನೇ ದಿನೇ ಜಾತಿ ಪದ್ಧತಿಯ ವಿರುದ್ಧ ದನಿ ಎತ್ತುತ್ತಿದ್ದ ನಮ್ಮ ನಡುವೆ ಅಸ್ಪೃಶ್ಯತೆ ಬೇಡ ಎಂದು ಹೇಳುತ್ತಿರುವ ಸಂದರ್ಭದಲ್ಲಿ ತಮಿಳುನಾಡಿನ ತಿರುಚ್ಚಿಯ ಮೇಲೂರು ರಸ್ತೆಯಲ್ಲಿರುವ ಶ್ರೀ ಶಕ್ತಿ ಕನ್ಸ್ಟ್ರಕ್ಷನ್ ಕಂಪೆನಿಯ ಬಿಲ್ಡರ್ ಒಬ್ಬರು ಅಸ್ಪೃಶ್ಯತೆ ಸಾರುವ ಯೋಜನೆ ಹಾಕಿಕೊಂಡಂತಿದೆ. ಹೌದು ಈ ಬಿಲ್ಡರ್ ತಿರುಚಿಯ ಮೇಲೂರು ರಸ್ತೆಯಲ್ಲಿ ನಿರ್ಮಿಸಿರುವ ಶ್ರೀ ಶಕ್ತಿ ಅಪಾರ್ಟ್ಮೆಂಟ್ ಮುಂದೆ ಫಲಕವೊಂದನ್ನು ಹಾಕಿದ್ದಾನೆ.
ಹೊಸದಾಗಿ ನಿರ್ಮಿತವಾಗಿರುವ ಈ ಅಪಾರ್ಟ್ಮೆಂಟ್ ನಲ್ಲಿ ಕೇವಲ ಬ್ರಾಹ್ಮಣ ಜಾತಿಯವರಿಗೆ ಸೇರಿದ ಜನರಿಗೆ ಮಾತ್ರ ವಸತಿಗಳನ್ನು ನೀಡಲಾಗುತ್ತದೆ ಎಂದು ಫಲಕದ ಮೇಲೆ ಬರೆಯಲಾಗಿದೆ. ಇನ್ನು ಇದನ್ನು ಕಂಡ ಜನತೆ ಬಿಲ್ಡರ್ ವಿರುದ್ಧ ರೊಚ್ಚಿಗೆದ್ದು ತಮಿಳುನಾಡು ಅಸ್ಪೃಶ್ಯತೆ ನಿವಾರಣೆ ರಂಗ ಗೆ ದೂರನ್ನು ನೀಡಿದೆ. ಈಗಿನ ಕಾಲದಲ್ಲಿಯೂ ಸಹ ಈ ತರಹದ ಜಾತಿ ಬೇಧ ಭಾವ ಮಾಡುವ ಜನ ಇರುವುದನ್ನು ನೋಡಿದರೆ ನಮ್ಮ ಜನ ಯಾವಾಗ ಉದ್ದಾರ ಆಗುತ್ತಾರೆ ಎಂದು ಅನಿಸದೇ ಇರಲಾರದು..