ನೀವು ಮಾವುಪ್ರಿಯರಾ!? ಹಾಗಿದ್ರೆ ಹಣ್ಣು ತಿಂದ್ಮೇಲೆ ಈ ತಪ್ಪನ್ನು ಮಾತ್ರ ಮಾಡ್ಬೇಡಿ!
ಅತಿಯಾದ ಮಾವಿನ ಹಣ್ಣಿನ ಸೇವನೆಯು ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಹಾಗಾದ್ರೆ ಮಾವಿನ ಹಣ್ಣನ್ನು ತಿನ್ನಬಾರದಾ ಎಂದು ನೀವು ಕೇಳಬಹುದು. ಆದರೆ ತಜ್ಞರು ಹೇಳುವ ಪ್ರಕಾರ, ಮಾವಿನಹಣ್ಣನ್ನು ಮಿತವಾಗಿ ತಿನ್ನಬಹುದು. ಇದರಿಂದ ದೇಹದ ತೂಕ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವುದಿಲ್ಲ.
ಸಾಮಾನ್ಯವಾಗಿ ಸಾಕಷ್ಟು ಮಂದಿ ಹಣ್ಣು ತಿಂದ ಮೇಲೆ ನೀರು ಕುಡಿಯುತ್ತಾರೆ. ಆದ್ರೆ ಮಾವಿನ ಹಣ್ಣು ತಿಂದ ನಂತರ ತಂಪು ಪಾನೀಯಗಳನ್ನು ಕುಡಿಯಬಾರದಂತೆ.. ಏಕೆಂದರೆ ಮಾವಿನ ಹಣ್ಣಿನಲ್ಲಿರುವ ಸಿಟ್ರಿಕ್ ಆಸಿಡ್ ಮತ್ತು ತಂಪು ಪಾನೀಯದಲ್ಲಿರುವ ಕಾರ್ಬೊನಿಕ್ ಆಮ್ಲ ಸೇರಿ ದೇಹದಲ್ಲಿ ವಿಷವನ್ನು ಸೃಷ್ಟಿಸುತ್ತದೆ. ಇದರಿಂದ ಪ್ರಾಣಕ್ಕೆ ಕುತ್ತು ಬರಬಹುದು ಎಂದು ಹೇಳಲಾಗಿದೆ. ಆದ್ರೆ ಮಾವಿನ ಹಣ್ಣನ್ನು ತಿಂದ ಬಳಿಕ ತಂಪು ಪಾನೀಯಗಳನ್ನು ಕುಡಿದರೇ ಸಾವು ಸಂಭವಿಸುತ್ತದೆ ಎಂಬುವುದಕ್ಕೆ ನಿಖರ ಮಾಹಿತಿ ಇಲ್ಲ.
ಇನ್ನೂ, ಮಾವಿನ ಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ಏನೆಲ್ಲಾ ಪ್ರಯೋಜನ ಆಗುತ್ತದೆ ಎಂದು ತಿಳಿದುಕೊಳ್ಳಿ. ಮಾವಿನ ಹಣ್ಣಿನಲ್ಲಿ ವಿಟಮಿನ್ ಎ, ಸಿ ಮತ್ತು ಕೆ ಜೊತೆಗೆ ಪೊಟ್ಯಾಸಿಯಮ್, ಬೀಟಾ-ಕ್ಯಾರೋಟಿನ್, ಫೋಲೇಟ್ ಮತ್ತು ಮೆಗ್ನೀಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಸೆಲೆನಿಯಮ್, ರಂಜಕ ಮತ್ತು ಮ್ಯಾಂಗನೀಸ್ ಸೇರಿದಂತೆ ಹಲವಾರು ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿದೆ. ಮಾವಿನ ಹಣ್ಣಿನಲ್ಲಿ ವಿಟಮಿನ್ ಎ, ಸಿ ಮತ್ತು ಕೆ ಜೊತೆಗೆ ಪೊಟ್ಯಾಸಿಯಮ್, ಬೀಟಾ-ಕ್ಯಾರೋಟಿನ್, ಫೋಲೇಟ್ ಮತ್ತು ಮೆಗ್ನೀಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಸೆಲೆನಿಯಮ್, ರಂಜಕ ಮತ್ತು ಮ್ಯಾಂಗನೀಸ್ ಸೇರಿದಂತೆ ಹಲವಾರು ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಅಷ್ಟೇ ಅಲ್ಲದೇ ಇದು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ.