ಮೊಟ್ಟೆ ಸಸ್ಯಹಾರಿಯೋ ಅಥವಾ ಮಾಂಸಹಾರಿಯೋ ಎಂಬ ವಾದ ವಿವಾದ ನಡೆಯುತ್ತಲೇ ಇದೆ. ದಿನಕ್ಕೊಂದು ಮೊಟ್ಟೆ ತಿಂದ್ರೆ ಆರೋಗ್ಯ ಚನ್ನಾಗಿರುತ್ತೆ ಅಂತಾ ಎಲ್ಲಾರಿಗೂ ಗೊತ್ತಿರುವ ವಿಚಾರವೇ. ಆದ್ರೆ ಅತೀ ಹೆಚ್ಚು ತಿಂದ್ರೆ ಏನಾಗುತ್ತೆ ಗೊತ್ತಾ..? ಕ್ಯಾಲ್ಷಿಯಂ, ಮಿಟಮಿನ್, ಪ್ರೊಟೀನ್ಸ್ ಇರುವ ಈ ಮೊಟ್ಟೆಯಿಂದ ಹೃದಯಕ್ಕೂ ತೊಂದರೆಯಾಗವು ಸಾಧ್ಯತೆಗಳು ಹೆಚ್ಚು ಇರುತ್ತೆ.
JAMA ಜರ್ನಲ್ ನಡೆಸಿದ ಸಂಶೋಧನೆಯ ಪ್ರಕಾರ, ಒಬ್ಬ ವ್ಯಕ್ತಿ ದಿನಕ್ಕೆ 300 ಗ್ರಾಂ ಕೊಲೆಸ್ಟ್ರಾಲ್ ಇರುವ ಆಹಾರ ಸೇವಿಸಬೇಕು. ಇಲ್ಲವಾದರೆ ಹೃದಯ ಸಂಬಂಧಿ ಕಾಯಿಲೆ ಕಾಡಬಹುದು. ಒಂದು ಮೊಟ್ಟೆ ತಿಂದರೆ ಅದರಲ್ಲಿ ದೇಹಕ್ಕೆ ಬೇಕಾದಷ್ಟು ಕೊಬ್ಬಿನಾಂಶವೂ ಇರುತ್ತದೆ. ಆದರೆ, ಅಗತ್ಯಕ್ಕಿಂತ ಹೆಚ್ಚು ತಿನ್ನಬಾರದು. ಒಂದು ವೇಳೆ ಅಗತ್ಯಕ್ಕಿಂತ ಹೆಚ್ಚು ಮೊಟ್ಟೆಯನ್ನು ತಿಂದರೆ ಅಪಾಯ ಕಟ್ಟಿಟ್ಟ ಬುತ್ತಿ.
ಬಾಯಲ್ಡ್ ಎಗ್ನಲ್ಲಿ ತುಸು ಫ್ಯಾಟ್ ಅಂಶ ಕಡಿಮೆ ಇರುತ್ತೆ ಅಂದರೆ ಮೊಟ್ಟೆ ಆರೋಗ್ಯಕ್ಕೆ ಒಳಿತು ಎಂದರ್ಥ. ಅದರಲ್ಲಿಯೂ ದಿನಕ್ಕೊಂದು ತಿಂದರೆ ಸಾಕು. ಆದರೆ, ಅಗತ್ಯಕ್ಕಿಂತ ಹೆಚ್ಚು ತಿಂದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ ಎನ್ನುತ್ತದೆ ಈ ಸಂಶೋಧನೆ.
ನೀವು ಹೆಚ್ಚು ಮೊಟ್ಟೆ ತಿನ್ನೋರಾದ್ರೆ ಇದನ್ನು ಓದಲೇ ಬೇಕು..!
Date: