‘ನೆನಪಿರಲಿ’ ಪ್ರೇಮ್ 25 ನೇ ಚಿತ್ರಕ್ಕೆ ಟೈಟಲ್ ಫಿಕ್ಸ್ .

Date:

ಪ್ರಾಣ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಪ್ರೇಮ್ ‘ನೆನಪಿರಲಿ’ ಪ್ರೇಮ್ಎಂದೇ ಜನಪ್ರಿಯರಾಗಿದ್ದು, ಸದ್ಯ ಇವರ ವೃತ್ತಿ ಬದುಕಿನ 25 ನೇ ಚಿತ್ರ ಶುರುವಾಗುತ್ತಿದೆ. ಈಗಾಗಲೇ ಸುದ್ದಿಯಾಗಿರುವಂತೆ ಈ ಚಿತ್ರವನ್ನು ನ್ಯೂರೋಲಾಜಿಸ್ಟ್ ಆಗಿರುವ ಡಾ. ರಾಘವೇಂದ್ರ ಆಯಕ್ಷನ್ ಕಟ್ ಹೇಳುತ್ತಿದ್ದು, ಚಿತ್ರಕ್ಕೆ ಟೈಟಲ್ ಫಿಕ್ಸ್ ಮಾಡಲಾಗಿದೆ.

ಹೌದು, ಪ್ರೇಮ್ ನಾಲ್ಕು ವಿಭಿನ್ನ ಬಗೆಯ ಗೆಟಪ್ ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರಕ್ಕೆ ‘ಪ್ರೇಮಂ ಪೂಜ್ಯಂ’ ಎಂದು ಟೈಟಲ್ ಫಿಕ್ಸ್ ಮಾಡಲಾಗಿದ್ದು, ಸದ್ಯ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ.

‘ನೆನಪಿರಲಿ’, ‘ಪಲ್ಲಕ್ಕಿ’, ‘ಸವಿ ಸವಿ ನೆನೆಪು’, ‘ಗೌತಮ’, ‘ಧನ್ ಧನಾ ಧನ್’, ‘ಚಾರ್ ಮಿನಾರ್’, ‘ಚೌಕ’, ‘ಲೈಫ್ ಜೊತೆ ಒಂದು ಸೆಲ್ಪೀ’.. ಹೀಗೆ 17 ವರ್ಷಗಳಲ್ಲಿ 24 ಸಿನಿಮಾದಲ್ಲಿ ಬಣ್ಣ ಹಚ್ಚಿರುವ ಪ್ರೇಮ್ ಸಧ್ಯ ತನ್ನ 25 ನೇ ಸಿನಿಮಾದಲ್ಲಿ ಅಪರೂಪದ ಪಾತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ.

ಸದ್ಯ ಬಿಡುಗಡೆಯಾಗಿರುವ ಚಿತ್ರದ ಫಸ್ಟ್ ಲುಕ್ ಸಿಕ್ಕಾಪಟ್ಟೆ ಕುತೂಹಲ ಮೂಡಿಸುತ್ತಿದೆ. ಇನ್ನು ಚಿತ್ರದ ಬಗ್ಗೆ ಹೆಚ್ಚೇನು ಬಿಟ್ಟುಕೊಡದ ಚಿತ್ರತಂಡ ಸದ್ಯ ಪ್ರೀ-ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಇನ್ನು ತಮ್ಮ 25ನೇ ಸಿನಿಮಾ ಸ್ವಲ್ಪ ವಿಭಿನ್ನವಾಗಿರಬೇಕೆಂದು ಸಿನಿಮಾ ನಿರ್ದೇಶನದ ಹೊಣೆಯನ್ನು ಹೊಸ ನಿರ್ದೇಶಕರಿಗೆ ಕೊಟ್ಟಿದ್ದಾರೆ ಪ್ರೇಮ್.

Share post:

Subscribe

spot_imgspot_img

Popular

More like this
Related

ಸುದ್ದಿ ವಾಹಿನಿಗಳ ಟಿ ಆರ್ ಪಿ ಪಟ್ಟಿ ರಿಲೀಸ್ ಯಾವ ನ್ಯೂಸ್ ಚಾನೆಲ್ ನಂ1 !

ಕಳೆದ ವಾರದ ಕನ್ನಡ ಸುದ್ದಿ ವಾಹಿನಿಗಳ ಟಿ ಆರ್ ಪಿ ಪಟ್ಟಿ...

ಏರ್‌ಪೋರ್ಟ್‌ನಲ್ಲಿ ದಕ್ಷಿಣ ಕೊರಿಯಾ ಮಹಿಳೆಗೆ ಲೈಂಗಿಕ ಕಿರುಕುಳ: ಅಧಿಕಾರಿಯ ಬಂಧನ

ಏರ್‌ಪೋರ್ಟ್‌ನಲ್ಲಿ ದಕ್ಷಿಣ ಕೊರಿಯಾ ಮಹಿಳೆಗೆ ಲೈಂಗಿಕ ಕಿರುಕುಳ: ಅಧಿಕಾರಿಯ ಬಂಧನ ದೇವನಹಳ್ಳಿಬೆಂಗಳೂರು: ಕೆಂಪೇಗೌಡ...

ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಹೆಸರಿನಲ್ಲಿ ನಕಲಿ ಸೋಷಿಯಲ್ ಮೀಡಿಯಾ ಅಕೌಂಟ್‌ಗಳು: ಸೈಬರ್ ಕ್ರೈಂ ತನಿಖೆ

ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಹೆಸರಿನಲ್ಲಿ ನಕಲಿ ಸೋಷಿಯಲ್ ಮೀಡಿಯಾ ಅಕೌಂಟ್‌ಗಳು: ಸೈಬರ್...

ಪ್ರತಿಷ್ಠಿತ ಮಠದ ಸ್ವಾಮೀಜಿಗೆ ಬ್ಲ್ಯಾಕ್ ಮೇಲ್: ಮಹಿಳೆ ಬಂಧನ, ಸಿಸಿಬಿ ಕಾರ್ಯಾಚರಣೆ

ಪ್ರತಿಷ್ಠಿತ ಮಠದ ಸ್ವಾಮೀಜಿಗೆ ಬ್ಲ್ಯಾಕ್ ಮೇಲ್: ಮಹಿಳೆ ಬಂಧನ, ಸಿಸಿಬಿ ಕಾರ್ಯಾಚರಣೆ ಬೆಂಗಳೂರು:ರಾಜ್ಯದ...