ನೆನೆಸಿಟ್ಟ ಬಾದಾಮಿ ತಿನ್ನುವುದರಿಂದ ನಿಮ್ಮ ಚರ್ಮಕ್ಕೆ ಏನೆಲ್ಲಾ ಪ್ರಯೋಜನವಿದೆ ಗೊತ್ತಾ..?
ಬಾದಾಮಿ ಪೋಷಕಾಂಶದಲ್ಲಿ ಸಮೃದ್ಧವಾದ ಬೀಜ. ಇದರಲ್ಲಿ ಇರುವ ವಿಟಮಿನ್ E, ಆಂಟಿಆಕ್ಸಿಡೆಂಟ್ಸ್ ಮತ್ತು ಆರೋಗ್ಯಕರ ಕೊಬ್ಬುಗಳು ಚರ್ಮಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತವೆ. ತಜ್ಞರ ಪ್ರಕಾರ ಬಾದಾಮಿಯನ್ನು ಹಾಗೇ ತಿನ್ನುವುದಕ್ಕಿಂತ ನೆನೆಸಿಟ್ಟು ಸೇವಿಸುವುದರಿಂದ ಚರ್ಮಕ್ಕೆ ಹೆಚ್ಚಿನ ಲಾಭ ಸಿಗುತ್ತದೆ.
ನೆನೆಸಿದ ಬಾದಾಮಿಯ ಚರ್ಮಕ್ಕೆ ಲಾಭಗಳು:
ಉತ್ತಮ ಜಲಸಂಚಯನ:
ನೆನೆಸಿದ ಬಾದಾಮಿಯಲ್ಲಿರುವ ನೀರಿನ ಅಂಶ ದೇಹವನ್ನು ತೇವಾಂಶದಿಂದ ಇಡಲು ಸಹಾಯ ಮಾಡುತ್ತದೆ. ವಿಷವನ್ನು ಹೊರಹಾಕಿ ರಕ್ತ ಸಂಚಲನವನ್ನು ಉತ್ತಮಗೊಳಿಸುವ ಮೂಲಕ ಚರ್ಮವನ್ನು ಮೃದು ಹಾಗೂ ಆರೋಗ್ಯಕರವಾಗಿಸುತ್ತದೆ.
ಆಂಟಿಆಕ್ಸಿಡೆಂಟ್ ರಕ್ಷಣೆ:
ವಿಟಮಿನ್ E ಮತ್ತು ಪಾಲಿಫೆನಾಲ್ಸ್‌ಗಳಿಂದ ಸಮೃದ್ಧವಾದ ಬಾದಾಮಿ ಚರ್ಮದ ಕಾಂತಿಯನ್ನು ಒಳಗಿನಿಂದ ಹೆಚ್ಚಿಸುತ್ತದೆ. ನಿಯಮಿತ ಸೇವನೆಯಿಂದ ನೆರೆ, ಸುಕ್ಕು ಕಡಿಮೆಯಾಗುತ್ತವೆ ಹಾಗೂ ವಯಸ್ಸಾದಂತೆ ಕಾಣದಂತೆ ತಡೆಯುತ್ತದೆ.
ಮಾಯಿಶ್ಚರೈಸೇಶನ್:
ಬಾದಾಮಿಯಲ್ಲಿರುವ ಆರೋಗ್ಯಕರ ಮೊನೋಸ್ಯಾಚುರೇಟೆಡ್ ಕೊಬ್ಬುಗಳು ಚರ್ಮವನ್ನು ಒಳಗಿನಿಂದ ತೇವಗೊಳಿಸುತ್ತವೆ. ಶುಷ್ಕತೆ, ಮಂಕಾಗುವಿಕೆ ಮತ್ತು ಕಿರಿಕಿರಿಯನ್ನು ತಡೆಯುವ ಮೂಲಕ ನೈಸರ್ಗಿಕ ಕಂತು ನೀಡುತ್ತವೆ.
ಉರಿಯೂತ ಕಡಿಮೆ:
ಬಾದಾಮಿಯಲ್ಲಿರುವ ಓಮೆಗಾ-3 ಫ್ಯಾಟಿ ಆಸಿಡ್ ಮತ್ತು ಪಾಲಿಫೆನಾಲ್ ಉರಿಯೂತ ತಗ್ಗಿಸಲು ಸಹಕಾರಿ. ಇದರಿಂದ ಮುಖದ ಮೇಲೆ ಮೊಡವೆ, ಎಕ್ಸಿಮಾ ಮತ್ತು ಸೋರಿಯಾಸಿಸ್ ಸಮಸ್ಯೆಗಳನ್ನು ನಿಯಂತ್ರಿಸಬಹುದು.