ರಾಜ್ಯದಲ್ಲಿ ಮಳೆಯಿಂದ ಹಾನಿಯಾಗಿ ಸಂಕಷ್ಟಕ್ಕೊಳಗಾದ ಜನರಿಗೆ ದೈನಂದಿನ ಬಳಕೆ ವಸ್ತುಗಳು, ದವಸ ಧಾನ್ಯ ಮೊದಲಾದವನ್ನು ಸಂಗ್ರಹಿಸಿ ನಿರಾಶ್ರಿತರ ಶಿಬಿರಗಳಿಗೆ ಕಳುಹಿಸಿಕೊಡಲಾಗುತ್ತಿದ್ದು, ಇದರ ಜೊತೆಗೆ ಸೀರೆ ಸೇರಿದಂತೆ ಉಡುಪುಗಳನ್ನು ನೀಡಲಾಗುತ್ತಿದೆ.
ಪ್ರವಾಹ ಸಂತ್ರಸ್ತರಿಗಾಗಿ ರಾಜ್ಯದ ನಾನಾ ದೇವಸ್ಥಾನಗಳಿಗೆ ಕಾಣಿಕೆಯಾಗಿ ಬಂದಿದ್ದ ಒಟ್ಟು 21,000 ಸೀರೆಗಳನ್ನು ಕಳುಹಿಸಿಕೊಡಲಾಗಿದ್ದು, ಇವುಗಳನ್ನು ನೆರೆ ಸಂತ್ರಸ್ತ ಮಹಿಳೆಯರಿಗೆ ನೀಡಲು ಕ್ರಮ ಕೈಗೊಳ್ಳಲಾಗಿದೆ.