ನೇಪಾಳದಲ್ಲಿ ಪ್ರಬಲ ಭೂಕಂಪನ: 80 ಮಂದಿ ಬಲಿ – ನೂರಾರು ಮಂದಿಗೆ ಗಾಯ

0
81

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಪ್ರಬಲ ಭೂಕಂಪನಕ್ಕೆ 80 ಮಂದಿ ಬಲಿಯಾಗಿದ್ದಾರೆ. ನೂರಾರು ಮಂದಿಗೆ ಗಾಯಗಳಾಗಿವೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 6.4ರಷ್ಟು ದಾಖಲಾಗಿದೆ. ಕಟ್ಟಡಗಳು ಉರುಳಿದ್ದು, ಮನೆಗಳ ಗೋಡೆಗಳು ಬಿರುಕುಬಿಟ್ಟಿದೆ. ಧರೆಗುರುಳಿದ ಕಟ್ಟಡದ ಅವಶೇಷಗಳಡಿ ನೂರಾರು ಮಂದಿ ಸಿಲುಕಿರುವ ಸಾಧ್ಯತೆ ಇದೆ. ನೇಪಾಳದ ರುಕುಂ ವೆಸ್ಟ್ ಪ್ರದೇಶದಲ್ಲಿ 36 ಮಂದಿ,
ಜಾಜರ್ಕೋಟ್ ಪ್ರದೇಶದಲ್ಲಿ 34 ಮಂದಿ ಮೃತಪಟ್ಟಿದ್ದಾರೆ. ಸಾವು- ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಳ ಆಗುವ ಸಂಭವ ಇದೆ. ಭಾರತದ ಹಲವು ರಾಜ್ಯಗಳಲ್ಲೂ ಭೂಮಿ ಕಂಪಿಸಿದೆ. ಬಿಹಾರ, ಜಾರ್ಖಂಡ್, ಉತ್ತರಾಖಂಡ್ ಸೇರಿ ಹಲವೆಡೆ ಭೂಮಿ ನಡುಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ 1ತಿಂಗಳಲ್ಲಿ 3ನೇ ಭೂಮಿ ಕಂಪಿಸಿದೆ. ಆತಂಕಗೊಂಡ ಜನ ಮನೆಯಿಂದ ಆಚೆ ಬಂದು ರಾತ್ರಿಯೆಲ್ಲಾ ರೋಡಲ್ಲೇ ಜಾಗರಣ ಮಾಡಿದ್ದಾರೆ.