ಕನ್ನಡ ಸಿನಿಮಾಗಳು ಸದ್ದು ಮಾಡಬೇಕು, ಆಗಲೇ ಚಿತ್ರರಂಗವೂ ಸದ್ದು ಮಾಡೋದು… ಕೋವಿಡ್ ನಂತರ ‘ಪೊಗರು’ ಅಬ್ಬರಿಸಿದೆ… ಕೊಟ್ಟ ಕಾಸು ಒಂದು ಪೈಸೆ ನಷ್ಟವಾಗದ ಹಾಗೆ ಸಿನಿಮಾ ಕಟ್ಟಕೊಟ್ಟಿದ್ದಾರೆ ನಿರ್ದೇಶಕ ನಂದಕಿಶೋರ್… ಸಿನಿಮಾದ ಹೀರೋ ಅಂದ ಮಾತ್ರಕ್ಕೆ ಸ್ಟೈಲಾಗಿ ಏರೋಪ್ಲೇನಿಂದ ಇಳೀಬೇಕು ಅನ್ನೋರ ಮಧ್ಯೆ ಪಾತ್ರಕ್ಕೆ ಹೊಂದಿಕೊಂಡು ಇಡೀ ಸಿನಿಮಾದಲ್ಲಿ ರಗಡ್ ಆಗಿ ಛಾಪು ಮೂಡಿಸಿದ್ದಾರೆ ಧೃವಾ ಸರ್ಜಾ… ಇಡೀ ಸಿನಿಮಾದ ಜೀವವಾಗಿ, ಜೀವಾಳವಾಗಿ ತನ್ನ ಹೆಗಲ ಮೇಲೆ ಇಡೀ ಸಿನಿಮಾ ಹೊತ್ತಿದ್ದಾರೆ… ಸಿನಿಮಾಗೋಸ್ಕರ ಅವರ ಡೆಡಿಕೇಶನ್ ನೋಡಿದ್ರೆ ಖುಷಿಯಾಗುತ್ತೆ...
ಬರೀ ಮಾಸ್ ಅಂತ ಅಂದುಕೊಂಡರೆ ಅದು ತಪ್ಪಾಗುತ್ತೆ… ಸಖತ್ ಸಂಭಾಷಣೆಯ ಜೊತೆ ನಗೆಗಡಲಲ್ಲಿ ತೇಲಿಸೋ ಕಾಮಿಡಿ ಇದೆ, ಸಂಬಂಧಗಳನ್ನು ಜೀವಂತವಾಗಿಡೋ ಎಮೋಶನಲ್ ಸೀನ್‌ಗಳಿದೆ.. ಗಟ್ಟಿಯಾದ ನಿರೂಪಣೆ ಇದೆ… ಕಣ್ಣಿಗೆ ಹಬ್ಬ ಅನ್ನುವಂತಹ ಹಾಡುಗಳಿವೆ… ಫೈಟ್ಸ್ ಅಂತೂ ಸಖತ್ ಮಾಸ್… ಇದು ಪೊಗರು ಹವಾ…
ರಶ್ಮಿಕಾ ಮುದ್ದು ಮುದ್ದು ಅನ್ನಿಸ್ತಾರೆ , ಚಿಕ್ಕಣ್ಣ, ಕುರಿ ಪ್ರತಾಪ್ ಕಚಗುಳಿ ಇಡ್ತಾರೆ…ರವಿಶಂಕರ್, ಪವಿತ್ರ ಲೋಕೇಶ್ ಸಖತ್ ಇಷ್ಟವಾಗ್ತಾರೆ…ಧನಂಜಯ್ ಇನ್ನೂ ಸ್ವಲ್ಪ ಹೊತ್ತು ಇರಬೇಕಿತ್ತು ಅನ್ಸುತ್ತೆ… ಟೋಟಲಿ ಸಕತ್ ಇಷ್ಟವಾಗುತ್ತೆ…
ಚಂದನ್ ಶೆಟ್ಟಿ ಹಾಡುಗಳು, ಹರಿಕೃಷ್ಣ ಅವರ ಹಿನ್ನೆಲೆ ಸಂಗೀತ ಸಿನಿಮಾದ ಮತ್ತೊಂದು ಕಿಕ್… ಟೋಟಲಿ ಪ್ರೇಕ್ಷಕರ ಪಾಲಿಗೆ ‘ಪೊಗರು’ ಫುಲ್ ಮೀಲ್ಸ್… ಕುಟುಂಬ ಸಮೇತ ಹೋಗಿ… ಪ್ರತಿಯೊಬ್ಬರಿಗೂ ಇಷ್ಟವಾಗುವ ಸಿಕ್ಕಾಪಟ್ಟೆ ತಾಕತ್ತಿರೋ ಸಿನಿಮಾ ‘ಪೊಗರು’…