ಉಪ ಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಿದ್ದಾಜಿದ್ದಿ ಪೈಪೋಟಿಯನ್ನು ನೀಡಿ ಜಯಶಾಲಿಯಾದ ಶರತ್ ಬಚ್ಚೇಗೌಡ ಅವರು ಈ ಹಿಂದೆ ಬಿಜೆಪಿಯಲ್ಲಿದ್ದರೂ ಸಹ ಈ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರಿಂದ ಅವರ ಮೇಲೆ ಬಿಜೆಪಿಯವರಿಗೆ ಅಸಮಾಧಾನ ಇದೆ ಎಂದು ಹೇಳಲಾಗಿತ್ತು .
ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ವಚನ ಸ್ವೀಕಾರ ಕಾರ್ಯಕ್ರಮದ ನಂತರ ನೂಕುನುಗ್ಗಲು ಉಂಟಾಗಿದ್ದು, ಶರತ್ ಬಚ್ಚೇಗೌಡ ಸಿಎಂ ಬಳಿ ಮಾತನಾಡಲು ಹೋಗಿದ್ದಾರೆ. ಆದರೆ ಅವರನ್ನು ತಿರುಗಿಯೂ ನೋಡದೆ ಸಿಎಂ ಮುಂದೆ ಸಾಗಿದ್ದಾರೆ ಎನ್ನಲಾಗಿದೆ ಯಡಿಯೂರಪ್ಪ ಅವರು ಶರದ್ ಬಚ್ಚೇಗೌಡರು ಬಿಜೆಪಿಯಿಂದ ಹೊರ ಹೋಗಿದ್ದಕ್ಕೆ ಬೇಸರಗೊಂಡು ಅವರನ್ನು ಮಾತನಾಡಿಸಿಲ್ಲ ಎಂದು ರಾಜಕೀಯ ವಲಯದಲ್ಲಿ ಮಾತು ಕೇಳಿ ಬರುತ್ತಿದೆ .