ಸುದ್ದಿಗಾರರೊಂದಿಗೆ ಮಾತನಾಡಿದ. ರೇಣುಕಾಚಾರ್ಯ ಅವರು ಪರಮೇಶ್ವರ್ ಪಿಎ ರಮೇಶ್ ಅವರನ್ನು ಮುಗಿಸಲಾಗಿದೆ. ರಮೇಶ್ ಅವರ ಸಾವಿಗೆ ಬೇರೆ ಕಾರಣವಿದೆ. ಇದಕ್ಕೆ ಪರಮೇಶ್ವರ್ ಅವರೇ ಉತ್ತರ ನೀಡಬೇಕು. ಅದು ಸಹಜ ಸಾವಲ್ಲ ಎನ್ನಲಾಗಿದ್ದು ತನಿಖೆ ಬಳಿಕ ಸತ್ಯಾಂಶ ತಿಳಿಯುತ್ತದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ವಿನಾಕಾರಣ ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡಬಾರದು. ಕೇಂದ್ರ ಸರ್ಕಾರ ಸೇಡಿನ ರಾಜಕಾರಣ ಮಾಡಿಲ್ಲ. ರಮೇಶ್ ಅವರ ಆತ್ಮಹತ್ಯೆ ಬಗ್ಗೆ ಅನುಮಾನಗಳಿದ್ದು, ಸಾವಿನ ಬಗ್ಗೆ ತನಿಖೆ ನಡೆಸಬೇಕು. ಬಳಿಕ ಸತ್ಯಾಂಶ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.