ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಅವರ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಕ್ಲಿಷ್ಟ ಪಡೆದುಕೊಳ್ಳುತ್ತಿದ್ದು , ದಿನ ಕಳೆದಂತೆ ಒಂದೊಂದೆ ವಿಚಾರಗಳು ಪೊಲೀಸ್ ತನಿಖೆಯಿಂದ ಹೊರ ಬರುತ್ತಿವೆ. ಈ ಹಿಂದೆ ಐಟಿ ಅಧಿಕಾರಿಗಳು ರೇಡ್ ಮಾಡಿದ ಕಾರಣ ಅವಮಾನ ತಾಳಲಾರದೆ ಮತ್ತು ಪ್ರಶ್ನೆಗಳಿಗೆ ಉತ್ತರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಇತ್ತು ಆದರೆ ಇದೀಗ ಹೊಸದೊಂದು ಸುದ್ದಿ ಈ ಕುರಿತು ಹರಿದಾಡುತ್ತಿದ್ದು ವಿಡಿಯೋ ಒಂದರಿಂದ ರಮೇಶ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಸುದ್ದಿ ಇದೆ.
ಪರಮೇಶ್ವರ್ ಅವರ ಪಿಎ ರಮೇಶ್ ಅವರ ಮನೆ ಮೇಲೆ ಐಟಿ ದಾಳಿಯಾದಾಗ ರಮೇಶ್ ಅವರ ಮೊಬೈಲ್ ಅನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಅಧಿಕಾರಿಗಳು ವಶಪಡಿಸಿಕೊಂಡ ಈ ಒಂದು ಮೊಬೈಲ್ ನಲ್ಲಿ ರಮೇಶ್ ಅವರ ಖಾಸಗಿ ವಿಡಿಯೋಗಳು ಇತ್ತು ಎಂಬ ಸುದ್ದಿ ಇದೆ. ಹೀಗಾಗಿ ರಮೇಶ್ ಅವರು ತನ್ನ ಬಗ್ಗೆ ಎಲ್ಲರಿಗೂ ತಿಳಿದು ಹೋಗುತ್ತದೆ ಎಂದು ಹೆದರಿ ಹಾಗೂ ಐಟಿ ಅಧಿಕಾರಿಗಳ ರೇಡ್ ನಿಂದಾಗಿ ಅವಮಾನ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ.