ಪವರ್​​ ಸ್ಟಾರ್​ಗೆ ದೂದ್​ ಪೇಡ ಸಾಥ್..!

Date:

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಹಾಗೂ ಸಂತೋಷ್​ ಆನಂದ್​ ರಾಮ್ ಕಾಂಬಿನೇಷನ್​ನ ಬಹು ನಿರೀಕ್ಷಿತ ಕನ್ನಡ ಸಿನಿಮಾ ‘ಯುವ ರತ್ನ’. ಟೈಟಲ್​ ಲಾಂಚ್ ಆದಲ್ಲಿಂದಲೂ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟು ಹಾಕಿರುವ ಯುವರತ್ನ ಟೀಮ್ ದಿನದಿಂದ ದಿನಕ್ಕೆ ದೊಡ್ಡದಾಗುತ್ತಲೇ ಇದೆ.
5ನೇ ಹಂತದ ಶೂಟಿಂಗ್​ನಲ್ಲಿರುವ ಚಿತ್ರತಂಡವನ್ನು ದಿನಕ್ಕೊಬ್ಬರಂತೆ ಸ್ಟಾರ್​ ಗಳು ಸೇರಿಕೊಳ್ಳುತ್ತಿದ್ದಾರೆ. ತೆಲುಗಿನ ಸ್ಟಾರ್ ಮ್ಯೂಸಿಕ್ ಕಂಪೋಸರ್ ಎಸ್​.ಎಸ್​ ತಮನ್ ಮೊನ್ನೆ ಮೊನ್ನೆಯಷ್ಟೇ ತಂಡ ಕೂಡಿ ಕೊಂಡಿದ್ದರು. ಈಗ ಸ್ಯಾಂಡಲ್​ವುಡ್​ನ ಮತ್ತೊಬ್ಬ ಸ್ಟಾರ್ ತಂಡವನ್ನು ಕೂಡಿ ಕೊಂಡಿದ್ದಾರೆ.
ಹೌದು, ಸ್ಯಾಂಡಲ್​ವುಡ್​ನ ದೂದ್ ಪೇಡ ಖ್ಯಾತಿಯ ನಟ ದಿಗಂತ್ ಅವರು ಯುವರತ್ನ ಪುನೀತ್ ರಾಜ್​ಕುಮಾರ್ ಅವರ ತಂಡವನ್ನು ಸೇರಿಕೊಂಡಿದ್ದಾರೆ. ಸಿನಿಮಾದಲ್ಲಿ ಪುನೀತ್ ರಾಜ್​ಕುಮಾರ್ ಅವರು ಕಾಲೇಜು ವಿದ್ಯಾರ್ಥಿ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದು, ದಿಗಂತ್ ಪಾತ್ರ ಯಾವ್ದು ಅಂತ ಇನ್ನೂ ರಿವೀಲ್ ಆಗಿಲ್ಲ.
ಇನ್ನು ಚಿತ್ರತಂಡದಲ್ಲಿ ಸಾಯೇಷಾ ಸೈಗಲ್, ಟಗರು ಡಾಲಿ ಧನಂಜಯ್, ಕಾಕ್ರೋಚ್ ಸುಧೀಂದ್ರ ಮತ್ತಿತರರು ನಟಿಸುತ್ತಿದ್ದಾರೆ.

Share post:

Subscribe

spot_imgspot_img

Popular

More like this
Related

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ ಬೆಂಗಳೂರು:-...

TNIT South Indian Media Award ಯಶಸ್ವಿ

TNIT South Indian Media Award ಯಶಸ್ವಿಯಾಗಿ ಮೂಡಿಬಂದಿದೆ. ಈ ಯಶಸ್ಸಿಗೆ...

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್ ಮೈಸೂರು: ಭೂಮಿ...

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್ ಮೈಸೂರು: ನಾಡದೇವತೆ ಚಾಮುಂಡೇಶ್ವರಿ...