ಪಾಂಡ್ಯ-ರಾಹುಲ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ಇಬ್ಬರು ಯುವ ಆಟಗಾರರು ಇವರೇ ನೋಡಿ..
ಕಾಫಿ ವಿತ್ ಕರಣ್ ಷೋನಲ್ಲಿ ಹೆಣ್ಣುಮಕ್ಕಳ ಬಗ್ಗೆ ಕೀಳಾಗಿ ಮಾತನಾಡಿದ ಹಾರ್ದಿಕ್ ಪಾಂಡ್ಯ ಹಾಗು ಕೆ.ಎಲ್.ರಾಹುಲ್ ಗೆ ಬಿಸಿಸಿಐ ಸರಿಯಾಗೆ ಬಿಸಿ ಮುಟ್ಟಿಸಿದೆ.. ಇಬ್ಬರನ್ನ ತಂಡದಿಂದ ಕೈಬಿಟ್ಟು ತನಿಖೆಗೆ ಆದೇಶ ನೀಡಿದೆ.. ಹೀಗಾಗೆ ಆಸ್ಟ್ರೇಲಿಯಾ ಸಿರೀಸ್ ನಿಂದ ಹಿಡಿದು ನ್ಯೂಜಿಲೆಂಡ್ ವಿರುದ್ದ ನಡೆಯಲಿರುವ ಸರಣಿಗೂ ಈ ಇಬ್ಬರನ್ನ ಕೈ ಬಿಡಲಾಗಿದೆ..
ಹೀಗಾಗೆ ಇವರ ಜಾಗವನ್ನ ಯುವ ಕ್ರಿಕೆಟಿಗರಾದ ಆಲ್ರೌಂಡರ್ ವಿಜಯ್ ಶಂಕರ್ ಹಾಗು ಬ್ಯಾಟ್ಸಮನ್ ಶುಭ್ ಮನ್ ಗಿಲ್ ತುಂಬಲ್ಲಿದ್ದಾರೆ.. ಈ ಇಬ್ಬರು ಫೆಬ್ರವರಿ 15 ರಂದು ನಡೆಯಲಿರುವ ಆಸ್ಟ್ರೇಲಿಯಾ ಎರಡನೇ ಏಕದಿನ ಪಂದ್ಯದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ..
ಆಸ್ಟ್ರೇಲಿಯಾದಲ್ಲಿ ಏಕದಿನ ಪಂದ್ಯ ಮುಗಿಯುತ್ತಿದ್ದ ಹಾಗೆ ಇಡೀ ತಂಡ ನ್ಯೂಜಿಲೆಂಡ್ ಗೆ ಪ್ರವಾಸ ಕೈಗೊಳ್ಳಲ್ಲಿದ್ದು ಇದರಲ್ಲು ಸ್ಥಾನ ಪಡೆದುಕೊಂಡಿದ್ದಾರೆ.. ಕರಣ್ ಷೋನಲ್ಲಿ ನಾಲಿಗೆಗೆ ಲಗಮ್ ಇಲ್ಲದೆ ಮಾತನಾಡಿದ ಪಾಂಡ್ಯ ಹಾಗು ರಾಹುಲ್ ತಮ್ಮ ತಪ್ಪಿಗೆ ಈಗ ಸರಿಯಾದ ಶಿಕ್ಷೆಯನ್ನ ಅನುಭವಿಸುವಂತಾಗಿದೆ..